ದಾಖಲೆ ಇಲ್ಲದೆ ಹಣ ಸಾಗಾಟ: ಓರ್ವ ವಶ
ಮಂಗಳೂರು, ಎ. 7: ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 2.90 ಲಕ್ಷ ನಗದು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ರಾಜಶೇಖರ ಅಂಡಿಂಜೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕಾರಿನಲ್ಲಿ ಹಣ ಸಾಗಾಟ ಮಾಡುತಿದ್ದನೆಂದು ಆರೋಪಿಸಲಾಗಿದೆ. ಚುನಾವಣೆಯ ಹಿನ್ನೆಲಲ್ಲಿ ಪೊಲೀಸರು ವಾಹನ ತಪಾಸಣೆಗಳನ್ನು ಮಾಡುತ್ತಿದ್ದು, ಪಂಪ್‌ವೆಲ್ ಬಳಿ ತಪಾಸಣೆ ನಡೆಸಿದಾಗ ಸರಿಯಾದ ದಾಖಲೆ ಪತ್ರ ಇಲ್ಲದ ಕಾರಣ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆಗೊಳಪಡಿಸಿದ್ದಾರೆ.
Next Story





