ಅಫ್ಘಾನ್-ತಾಲಿಬಾನ್ ಮಾತುಕತೆಗೆ ಪಾಕ್ ಒಲವು
ಇಸ್ಲಾಮಾಬಾದ್, ಎ. 7: ಅಫ್ಘಾನಿಸ್ತಾನ ಸರಕಾರ ಮತ್ತು ತಾಲಿಬಾನ್ ನಡುವಿನ ಸ್ಥಗಿತಗೊಂಡಿರುವ ಮಾತುಕತೆಗೆ ಮರುಜೀವ ನೀಡುವ ತನ್ನ ಸಲಹೆಯನ್ನು ಅಫ್ಘಾನ್ ಒಪ್ಪಿಕೊಂಡಿದೆ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ದಶಕಗಳ ಹಳೆಯ ಸಂಘರ್ಷಕ್ಕೆ ಯುದ್ಧ ಪರಿಹಾರವಲ್ಲ ಎಂದು ಅವರು ಶನಿವಾರ ಹೇಳಿದರು.
ಕಾಬೂಲ್‌ಗೆ ಭೇಟಿ ನೀಡಿ ಅಫ್ಘಾನ್ ನಾಯಕರನ್ನು ಭೇಟಿಯಾದ ಒಂದು ದಿನದ ಬಳಿಕ ಅಬ್ಬಾಸಿ ಈ ಹೇಳಿಕೆ ನೀಡಿದ್ದಾರೆ.
Next Story





