Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾಭಾರತಿವಾರ್ತಾಭಾರತಿ8 April 2018 12:16 AM IST
share

ಗದ್ದಲದ ನಡುವೆಯೂ ಗಮನ ಸೆಳೆದ ಔಜ್ಲಾ

ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸಂಸದರ ವರ್ಣರಂಜಿತ ಪ್ರತಿಭಟನೆಗಳಿಗೆ ಕಳೆದ ವಾರದ ಸಂಸತ್ ಕಲಾಪವು ಸಾಕ್ಷಿಯಾಯಿತಾದರೂ, ಇವೆಲ್ಲದರ ನಡುವೆ ಅಮೃತಸರದ ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಸದನದ ಗಮನಸೆಳೆಯುವಲ್ಲಿ ಸಫಲರವಾಗಿದ್ದಾರೆ. ತನ್ನ ಕ್ಷೇತ್ರವಾದ ಅಮೃತಸರದಲ್ಲಿರುವ ವಿಶ್ವಪ್ರಸಿದ್ಧ ಸ್ವರ್ಣ ಮಂದಿರದಲ್ಲಿ ಯಾತ್ರಿಕರಿಗೆ ನೀಡಲಾಗುವ ಉಚಿತ ಭೋಜನ (ಲಂಗರ್)ಕ್ಕೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸುವ ಬೇಡಿಕೆಯನ್ನು ಅವರು ತನ್ನ ಕುರ್ತಾದ ಮೇಲೆ ಮುದ್ರಿಸಿಕೊಂಡಿದ್ದರು. ಔಜ್ಲಾ ಅವರು ಏಕಾಂಗಿಯಾಗಿ ಕುಳಿತಿದ್ದ ಅಡ್ವಾಣಿಯವರ ಬಳಿಗೂ ಬಂದು ಅವರ ಆಶೀರ್ವಾದ ಕೋರಿದರು. ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿರುವ ತನ್ನ ಬೆಂಬಲಿಗರಿಗೂ ಕಾಣಿಸುವಷ್ಟು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿದ್ದ ಸಂದೇಶವನ್ನು ಹೊಂದಿರುವ ಕುರ್ತಾದಲ್ಲಿ ಅವರು ಮಿಂಚುತ್ತಿದ್ದರು. ಅವರ ಪಕ್ಷದ ಬೆಂಬಲಿಗರಿಗೂ ತಮ್ಮ ಎಂ.ಪಿ. ಗಮನಸೆಳೆಯುತ್ತಿರುವುದು ಕಂಡು ಸಂಸತವಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಗದ್ದಲದ ಗೂಡಾಗಿರುವ ಸಂಸತ್‌ನಲ್ಲಿ, ಸದನದ ಗಮನವನ್ನು ಸೆಳೆಯುವುದು ಹೇಗೆಂಬುದನ್ನು ಅರಿತಿರುವ ಓರ್ವ ಸದಸ್ಯನಾದರೂ ಇದ್ದಾರೆಂದಾಯಿತು.


ಹವಾಮಾನ ತಜ್ಞ ಪಾಸ್ವಾನ್!
ಎಲ್ಲರ ಒಳಗೊಳ್ಳುವಿಕೆಯ ಸಮಾಜವನ್ನು ಹೇಗೆ ನಿರ್ಮಿಸಬಹುದೆಂಬುದನ್ನು ಕೇಸರಿ ಪಕ್ಷವಾದ ಬಿಜೆಪಿಯು ಕಲಿತುಕೊಳ್ಳಬೇಕಾಗಿದೆಯೆಂದು ಬಿಜೆಪಿಯ ಜೊತೆಗಾರ ರಾಮ್ ವಿಲಾಸ್ ಪಾಸ್ವಾನ್ ಇತ್ತೀಚೆಗೆ ತಿಳಿಸಿದ್ದರು. ಇದಾದ ಕೂಡಲೇ ಪಾಸ್ವಾನ್ ಬಗ್ಗೆ ಟ್ವಿಟರ್‌ನಲ್ಲಿ ಭಾರತದ ‘‘ಅತ್ಯಂತ ನಿಖರವಾದ ಹವಾಮಾನ ಮುನ್ಸೂಚನೆ ತಜ್ಞ’’ ಎಂಬ ವ್ಯಂಗ್ಯೋಕ್ತಿಗಳು ಹರಿದಾಡತೊಡಗಿದವು. ವಾಸ್ತವವಾಗಿ ಈ ಅಡ್ಡಹೆಸರನ್ನು ಪಾಸ್ವಾನ್ ಅವರಿಗೆ ಲಾಲು ಪ್ರಸಾದ್ ನೀಡಿದ್ದರು. ಈ ಹಿಂದೆಯೂ ಪಾಸ್ವಾನ್ ಅವರು ಚುನಾವಣಾ ಗಾಳಿ ಯಾವ ದಿಕ್ಕಿನತ್ತ ತಿರುಗಲಿದೆಯೆಂಬುದನ್ನು ಅತ್ಯಂತ ನಿಖರವಾಗಿ ತಿಳಿಸಿದ್ದರು. 2019ರ ಲೋಕಸಭಾ ಚುನಾವಣೆಗಳು ನಿಕಟವಾಗುತ್ತಿರುವಂತೆಯೇ, ಪಾಸ್ವಾನ್‌ರಿಂದ ಜೊತೆಗಾರ ಪಕ್ಷವಾದ ಬಿಜೆಪಿ ಬಗ್ಗೆ ಈ ರೀತಿಯ ನಕಾರಾತ್ಮಕ ಅನಿಸಿಕೆ ವ್ಯಕ್ತವಾಗಿರುವುದರ ಹಿಂದೆ ಏನೋ ವಿಶೇಷವಿದೆಯೆಂದು ಜನ ಟ್ವಿಟರ್‌ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಆನಂತರ ನಿತೀಶ್ ಕುಮಾರ್ ಕೂಡಾ ಪಾಸ್ವಾನ್‌ರ ಈ ಮಾತನ್ನು ಬಿಜೆಪಿ ಕೇಳಿಕೊಳ್ಳಬೇಕೆಂದು ಹೇಳಿರುವುದು ಇನ್ನೂ ಹೆಚ್ಚಿನ ಚರ್ಚೆಗೆ ಎಡೆಮಾಡಿಕೊಟ್ಟಿತು. ಮೈತ್ರಿಕೂಟದಿಂದ ಸವಲತ್ತುಗಳನ್ನು ಪಡೆದುಕೊಳ್ಳುವುದರಲ್ಲಿ, ಇಬ್ಬಂದಿತನದ ಮಾತುಗಳನ್ನಾಡುವಲ್ಲಿ ಲೋಕಜನಶಕ್ತಿ ಪಕ್ಷದ ಅಧ್ಯಕ್ಷರಾದ ರಾಮ್‌ವಿಲಾಸ್ ಪಾಸ್ವಾನ್ ಹೆಸರುವಾಸಿಯಾಗಿದ್ದಾರೆ. ಇದೀಗ ಅವರನ್ನು ಬಿಜೆಪಿ ಸಮಾಧಾನಪಡಿಸಿರುವ ಹಾಗೆ ಕಾಣುತ್ತದೆ. ಹೀಗಾಗಿ ಅವರು ತನ್ನ ಹಾಗೂ ಪ್ರಧಾನಿ ಮತ್ತು ಬಿಜೆಪಿ ನಡುವೆ ಅತ್ಯುತ್ತಮ ಬಾಂಧವ್ಯವಿರುವುದಾಗಿ ಪತ್ರಕರ್ತರಿಗೆ ವಿವರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಹಾಗೂ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಮರಳಲಿದೆಯೆಂದು ಹೇಳಿಕೊಂಡಿದ್ದಾರೆ. ಆದರೆ ಜನತೆ ಅವರನ್ನು ನಂಬುವ ಸ್ಥಿತಿಯಲ್ಲಿಲ್ಲ. ಅಂತಹ ‘ಖ್ಯಾತಿ’ಯನ್ನು ಪಾಸ್ವಾನ್ ಕಳೆದ ಹಲವಾರು ವರ್ಷಗಳಿಂದ ತಾವಾಗಿಯೇ ಗಳಿಸಿಕೊಂಡಿದ್ದಾರೆ.


ಬಡಪಾಯಿ ಚಡಾ
ದೀದಿ ರಾಜಧಾನಿಗೆ ಆಗಮಿಸಿದಾಗಲೆಲ್ಲಾ, ಅವರು ಒಂದಲ್ಲ ಒಂದು ರೀತಿಯಲ್ಲಿ ಚಿಂತನೆಗೆ ಗ್ರಾಸವನ್ನೊದಗಿಸು ತ್ತಾರೆ. ಇತ್ತೀಚೆಗೆ ತನ್ನ ದಿಲ್ಲಿ ಭೇಟಿಯ ಸಂದರ್ಭದಲ್ಲಿ ಮಮತಾ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಸವಾಲೊಡ್ಡಲು ಸಂಯುಕ್ತ ರಂಗಕ್ಕೆ ಜೀವ ನೀಡಲಿದ್ದಾರೆಂಬ ಪಿಸುಮಾತುಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಪ್ರತಿಪಕ್ಷಗಳನ್ನು ಚಿಂತನೆಗೆ ಹಚ್ಚುವಲ್ಲಿ ಅವರು ಯಶಸ್ವಿಯಾಗಿದ್ದಾರೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಆದಾಗ್ಯೂ ಅವರ ಪ್ರವಾಸವು ಸುದ್ದಿಗೆ ಗ್ರಾಸವಾದದ್ದಂತೂ ನಿಜ. ರಾಜಕೀಯ ಪಕ್ಷಗಳ ನಾಯಕರ ಜೊತೆಗೆ ಆಕೆ ನಡೆಸಿದ ಮಾತುಕತೆಗಳ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರಿಗೆ ಹಾಗೂ ಸಂಸದರಿಗೆ ಬೆಣ್ಣೆ ಟೋಸ್ಟ್, ಕಟ್ಲೆಟ್ ಹಾಗೂ ಮಿಠಾಯಿಗಳನ್ನು ಸವಿಯುವ ಅವಕಾಶವೂ ದೊರೆಯಿತು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಮಮತಾ ಬ್ಯಾನರ್ಜಿಯವರನ್ನು ಸೌತ್ ಅವೆನ್ಯೂ ಪ್ರದೇಶದಲ್ಲಿರುವ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ನಿವಾಸದಲ್ಲಿ ಭೇಟಿಯಾಗಿದ್ದರು. ಕೇಜ್ರಿವಾಲ್ ಜೊತೆ ಎಎಪಿ ವಕ್ತಾರ ರಾಘವ್ ಚಡಾ ಕೂಡಾ ಇದ್ದರು. ಚಡಾ ಅವರು ಎಎಪಿ ಅಂತರ್ ಪಕ್ಷೀಯ ಸಹಕಾರದ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿದ್ದಾರೆ. ಆತಿಥ್ಯದಲ್ಲಿ ಔದಾರ್ಯಕ್ಕೆ ಹೆಸರಾದ ಅಭಿಷೇಕ್ ಬ್ಯಾನರ್ಜಿಯವರು, ಈ ಕಾರ್ಯಕ್ರಮಕ್ಕಾಗಿ ಆರು ವಿಧದ ಸಸ್ಯಾಹಾರಿ ಪಕೋಡಾಗಳನ್ನು ಅತಿಥಿಗಳಿಗೆ ಉಣಬಡಿಸಿದರು. ಬಂಗಾಳದ ಪ್ರಸಿದ್ಧ ಖಾದ್ಯವಾದ ಬೆಗುನಿ ಕೂಡಾ ಅಲ್ಲಿತ್ತು. ಆದರೆ ತನ್ನ ಆರೋಗ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಜ್ರಿವಾಲ್, ಅವುಗಳನ್ನು ತಿನ್ನಲಾಗದೆ ವಿನಯಪೂರ್ವಕವಾಗಿ ತಿರಸ್ಕರಿಸಿದರು. ಇದರಿಂದಾಗಿ ಬಡಪಾಯಿ ಚಡಾ ಅವರು ಎರಡೂ ಪಕ್ಷಗಳ ನಡುವೆ ಗಾಢವಾದ ಬಾಂಧವ್ಯವನ್ನು ಗೌರವಿಸುವ ಪ್ರಯತ್ನವಾಗಿ ಈ ಪಕೋಡಾಗಳನ್ನು ಹೊಟ್ಟೆತುಂಬಾ ತಿನ್ನಬೇಕಾಯಿತು. ಚಡಾರನ್ನು ನಿಕಟವಾಗಿ ಗಮನಿಸುತ್ತಿದ್ದ ಮಮತಾ ಅವರು ಬಡಿಸಿದ ಎಲ್ಲಾ ಪಕೋಡಾಗಳನ್ನು ಖಾಲಿ ಮಾಡುವಂತೆ ಒತ್ತಾಯಪಡಿಸಿದ್ದರು. ಆಗ ಬಡಪಾಯಿ ಚಡಾ ಅವರ ಸ್ಥಿತಿ ಹೇಗಾಗಿರಬೇಡ ಎಂದು ದಿಲ್ಲಿಯ ಪತ್ರಕರ್ತರ ವಲಯಗಳಲ್ಲಿ ಜೋಕ್‌ಗಳು ಹರಿದಾಡುತ್ತಿವೆ.


ತೆಂಡುಲ್ಕರ್: ಗೈರುಹಾಜರಿಯಲ್ಲಿ ದಾಖಲೆ
 ಯುಪಿಎ-2 ಆಳ್ವಿಕೆಯಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಅತ್ಯಂತ ಆಡಂಬರದೊಂದಿಗೆ ಮೇಲ್ಮನೆಗೆ ನಾಮಕರಣ ಗೊಳಿಸಲಾಯಿತು. ಆದರೆ ರಾಜ್ಯಸಭೆಯಲ್ಲಿ ತೆಂಡುಲ್ಕರ್ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿದ್ದಾರೆ. ನಾಮಕರಣಗೊಂಡ ಸಂಸದರ ಪೈಕಿ ಹಾಜರಾತಿಯಲ್ಲಿ ಅವರ ದಾಖಲೆ ಅತ್ಯಂತ ಕಳಪೆಯಾಗಿದೆ. ಇತ್ತೀಚೆಗೆ ರಾಜ್ಯಸಭೆಯಿಂದ ತಾನು ನಿವೃತ್ತಿಯಾದ ಸಂದರ್ಭದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭಕ್ಕೂ ಸಚಿನ್ ಗೈರುಹಾಜರಾಗಿದ್ದರು. ಸಂಸತ್‌ನಲ್ಲಿ ಅವರ ಕಳಪೆ ಹಾಜರಾತಿಯ ಬಗ್ಗೆ ಕೆಲವು ಅರೆಕಾಲಿಕ ರಾಜಕಾರಣಿಗಳು ಗೊಣಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕರೊಬ್ಬರು ಈ ಹಿಂದೆ, ಸಚಿನ್ ಅವರಿಗೆ ರಾಜ್ಯಸಭಾ ಸದಸ್ಯನಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿಲ್ಲದಿದ್ದರೆ ಅವರು ರಾಜೀನಾಮೆ ನೀಡಲಿ ಎಂದು ಹೇಳಿದ್ದರು.

 ತೆಂಡುಲ್ಕರ್ ವಿಷಯದಲ್ಲಿ ಹೇಳುವುದಾದರೆ, ರಾಜ್ಯಸಭೆಯ ನಿಯಮಾವಳಿಗಳ ಪ್ರಕಾರ, ನಾಮನಿರ್ದೇಶಿತ ಸದಸ್ಯರು ನಿಯಮಿತವಾಗಿ ಸದನಕ್ಕೆ ಹಾಜರಾದರೂ, ಅವರಿಗೆ ಕಲಾಪದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ರಾಜ್ಯಸಭೆಯಲ್ಲಿ ರಾಜಕೀಯ ಪಕ್ಷಗಳ ಬಲಾಬಲದ ಆಧಾರದಲ್ಲಿ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಹೀಗಾಗಿ ದೊಡ್ಡ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರಿಗಷ್ಟೇ ಸದನದಲ್ಲಿ ಮಾತನಾಡಲು ಹೆಚ್ಚಿನ ಕಾಲಾವಕಾಶ ದೊರೆಯುತ್ತದೆ. ಒಂದು ವೇಳೆ ಸದನದಲ್ಲಿ ಮೂರು ತಾಸುಗಳ ಚರ್ಚೆ ನಡೆದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರಿಗೆ 90 ನಿಮಿಷಗಳ ಕಾಲಾವಕಾಶ ದೊರೆತರೆ, ನಾಮನಿರ್ದೇಶಿತ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೆಲವೇ ನಿಮಿಷಗಳಷ್ಟೇ ದೊರೆಯುತ್ತವೆ. ತೆಂಡುಲ್ಕರ್ ತನ್ನ ಎಲ್ಲಾ ವೇತನವನ್ನು ಪ್ರಧಾನಿಯ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿರಬಹುದು. ಆದರೆ ರಾಜ್ಯಸಭೆಯಲ್ಲಿ ಅವರ ನಿರ್ವಹಣೆಯು ಖಂಡಿತವಾಗಿಯೂ ಅವರ ಅಪಾರ ಅಭಿಮಾನಿಗಳ ಮನವನ್ನು ಗೆಲ್ಲಲಾರದು.



ಕಹಿಗುಳಿಗೆ
ಜನತಾದಳವು ತನ್ನ ಮೈತ್ರಿಕೂಟದ ಪಾಲುದಾರನಾದ ಬಿಜೆಪಿಗೆ ವಿಚ್ಛೇದನ ನೀಡುವ ಸಾಧ್ಯತೆಯಿರುವ ಬಗ್ಗೆ ರಾಜಕೀಯ ವಲಯಗಳಲ್ಲಿ ವ್ಯಾಪಕವಾದ ಊಹಾಪೋಹಗಳೆದ್ದಿವೆ. ಬಿಜೆಪಿಯೊಂದಿಗೆ ನಿತೀಶ್ ಅವರ ಅಸಮಾಧಾನ ಹೆಚ್ಚುತ್ತಿರುವುದು ಈ ಸಂಭಾವ್ಯ ಬಿರುಕಿಗೆ ಮುಖ್ಯ ಕಾರಣವಾಗಿದೆ. ಕಳೆದ ವರ್ಷ ನಿತೀಶ್ ಕುಮಾರ್ ಅವರ ತಿಪ್ಪರಲಾಗದಿಂದಾಗಿ ನೇರವಾಗಿ ಬಾಧಿತವಾಗಿರುವ ಪಕ್ಷಗಳಾದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ನಿತೀಶ್ ಕುಮಾರ್ ಬಗ್ಗೆ ಈಗ ಯಾವುದೇ ವಿಧದ ಸಹಾನುಭೂತಿಯಾಗಲಿ, ಕಳಕಳಿಯಾಗಲಿ ಇಲ್ಲ. ನಿತೀಶ್ ಬಗ್ಗೆ ತನ್ನ ಪಕ್ಷವು ಈಗ ಹೊಂದಿರುವ ನಿಲುವನ್ನು ಸಂಕ್ಷೇಪವಾಗಿ ಹೀಗೆ ವಿವರಿಸಿದ್ದಾರೆ. ‘‘ವಿಷಮ ದಾಂಪತ್ಯದಿಂದಾಗಿ ವಿಚ್ಛೇದನಗೊಂಡ ಮಹಿಳೆಯು ಅದೇ ವ್ಯಕ್ತಿಯನ್ನು ಮತ್ತೆ ವಿವಾಹವಾಗಿರುವುದು ಮತ್ತು ಆನಂತರ ತನ್ನ ಮರುವಿವಾಹದ ಬಗ್ಗೆ ಚಿಂತಿಸುವುದನ್ನು ಎಲ್ಲಿಯಾದರೂ ಕೇಳಿದ್ದೀರಾ’’ ಎಂದವರು ವ್ಯಂಗ್ಯವಾಡುತ್ತಾರೆ. ಕಾಂಗ್ರೆಸ್ ಪಕ್ಷವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ನಿತೀಶ್ ಸರಕಾರದ ಹಲವಾರು ವೈಫಲ್ಯಗಳನ್ನು ಟೀಕಿಸಿದೆ. ಆದರೆ, ತನಗೆ ಸಾಧ್ಯವಿರುವಷ್ಟು ಸಮಯದವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಯಸುತ್ತಿರುವ ಕುಮಾರ್ ಈ ವಿಷಯದಲ್ಲಿ ತನ್ನದೇ ಆದ ಯೋಜನೆಯನ್ನು ಹೊಂದಿರಲೂ ಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X