ಮಂಗಳೂರು: ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ ಯತ್ನ; ದೂರು

ಮಂಗಳೂರು, ಎ. 8: ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದ ಮಹಿಳೆಗೆ ಹಲ್ಲೆ ಮಾಡಲು ಯತ್ನಿಸಿದ ದುಷ್ಕರ್ಮಿಗಳು ಓಮ್ನಿ ಕಾರು ಹಾಗು ಸೊತ್ತು ನಾಶ ಮಾಡಿದ ಘಟನೆ ನಗರದ ಎಜೆ ಆಸ್ಪತ್ರೆ ಸಮೀಪ ರವಿವಾರ ನಡೆದಿದೆ.
ಓಮ್ನಿ ಕಾರಿನಲ್ಲಿ ಕ್ಯಾಟೀನ್ ನಡೆಸುತ್ತಿದ್ದ ಮಹಿಳೆಯನ್ನು ಕಮಲಾಕ್ಷಿ ಎಂದು ಗುರುತಿಸಲಾಗಿದೆ.
ಪತಿಯನ್ನು ಕಳೆದುಕೊಂಡಿರುವ ಕಮಲಾಕ್ಷಿ ಕಿಡ್ನಿ ವೈಫಲ್ಯದಿಂದ ಬಳಲುತಿದ್ದು, ಜೀವನ ನಿರ್ವಾಹಣೆಗಾಗಿ ಸುಮಾರು 2 ವರ್ಷಗಳಿಂದ ಕ್ಯಾಟೀನ್ ನಡೆಸುತ್ತಿದ್ದರು. ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು ಓಮ್ನಿ ಕಾರು ಹಾಗು ಕಾರಿನಲ್ಲಿದ್ದ ಸೊತ್ತುಗಳನ್ನು ನಾಶ ಮಾಡಿರುವುದಾಗಿ ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





