ಏಕಾಏಕಿ ಉರುಳಿ ಬಿದ್ದ ಜನಾಶೀರ್ವಾದ ಸಮಾರೋಪ ಸಮಾವೇಶದ ಬೃಹತ್ ಕಟೌಟ್

ಬೆಂಗಳೂರು, ಎ.8: ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಜನಾರ್ಶೀವಾದ ಸಮಾರೋಪ ಸಮಾವೇಶದ ವೇಳೆ ಬೃಹತ್ ಕಟೌಟ್ ಏಕಾಏಕಿ ಉರುಳಿ ಬಿದ್ದಿದೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಅವರ ಭಾವಚಿತ್ರ ಇದ್ದ ಬೃಹತ್ ಕಟೌಟ್ ಗಾಳಿಗೆ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಕೆಲವರಿಗೆ ಸಣ್ಣ ಪಟ್ಟ ಗಾಯಗಳಾಗಿವೆ ಎನ್ನಲಾಗಿದೆ.
Next Story





