ಅಡ್ಡೂರು: ಸಿಡಿಲು ಬಡಿದು ಬಾಲಕಿಗೆ ಗಾಯ

ಅಡ್ಡೂರು, ಎ. 8: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯೊಳಗಿದ್ದ ಬಾಲಕಿ ಗಾಯಗೊಂಡು, ವಿದ್ಯುತ್ ಸಲಕರಣೆಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಇಲ್ಲಿನ ನಡುಗುಡ್ಡೆಯಲ್ಲಿ ರವಿವಾರ ಸಂಜೆ ನಡೆದಿದೆ.
ನಡುಗುಡ್ಡೆ ನಿವಾಸಿ ದಿ. ಉಮರಬ್ಬ ಎಂಬವರ ಪುತ್ರಿ ಫಾತಿಮ (17) ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಫಾತಿಮ ಮನೆಯ ಕೋಣೆಯೊಳಗೆ ಮಲಗಿದ್ದ ವೇಳೆ ಕೈಗೆ ಸಿಡಿಲು ಬಡಿದು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಸಲಕರಣೆಗಳು ಸುಟ್ಟು ಭಸ್ಮವಾಗಿದ್ದು, ಇದರಿಂದ ಮನೆಯ ಗೋಡೆ ಬಿರುಕು ಬಿಟ್ಟಿದೆ. ಸುಮಾರು 1.50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Next Story





