ಪಡುಬಿದ್ರೆ: ಮನೆಗೆ ನುಗ್ಗಿ ತಂಡದಿಂದ ಹಲ್ಲೆ
ಪಡುಬಿದ್ರೆ, ಎ. 8: ಮನೆಗೆ ನುಗ್ಗಿ ಹಲ್ಲೆಗೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ನಂದಿಕೂರಿನಲ್ಲಿ ನಡೆದಿದ್ದು, ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಕುಮಾರ್ ದೇವಾಡಿಗ ಎಂಬವರು ಹಲ್ಲೆಗೊಳಗಾಗಿದ್ದು, ರಾಜೇಶ್ ಅಂಚನ್ ಹಾಗೂ ದೀಕ್ಷಿತ್ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಸಹೋದರಿ ಲಲಿತಾ ಪಡುಬಿದ್ರೆ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಮನೆಯಲ್ಲಿದ್ದಾಗ ಕಾರಿನಲ್ಲಿ ಬಂದ ರಾಜೇಶ್ ಅಂಚನ್, ದೀಕ್ಷಿತ್ ಎಂಬವರು ಸುಕುಮಾರ್ ದೇವಾಡಿಗ ಅವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ.
Next Story





