ಎಸ್ಡಿಪಿಐ: ಕೊಲ್ನಾಡು ಕಾರ್ಯಕರ್ತರ ಸಭೆ
.jpeg)
ಬಂಟ್ವಾಳ, ಎ. 9: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಲ್ನಾಡು ಗ್ರಾಮ ಸಮಿತಿ ವತಿಯಿಂದ ಚುನಾವಣಾ ಪೂರ್ವ ತಯಾರಿಯ ಭಾಗವಾಗಿ ಕಾರ್ಯಕರ್ತರ ಸಭೆಯು ರವಿವಾರ ರಾತ್ರಿ ಸಾಲೆತ್ತೂರಿನಲ್ಲಿ ನಡೆಯಿತು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಬಂಟ್ವಾಳದಲ್ಲಿ ಪೊಲೀಸರು ಮನೆಗೆ ನುಗ್ಗಿ ಕುರ್‌ಆನ್ ಎಸೆದಾಗ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಉಸ್ತುವಾರಿ ಸಚಿವರು, ವರದಿ ಮಾಡಿದ ಪತ್ರಕರ್ತನನ್ನೇ ಜೈಲಿಗೆ ಕಲಿಸುವಾಗ ಪೊಲೀಸರೊಂದಿಗೆ ಬಾಹ್ಯ ಬೆಂಬಲ ನಿಂತಿರುವುದು ಜಾತ್ಯಾತೀತಗೆ ನೀಡಿದ ಕೊಡುಗೆಯೇ? ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲಾ ಚುನಾವಣೆ ಮೂಲಕ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಮಾತನಾಡಿ, ಸಿದ್ದರಾಮಯ್ಯರಿಗೆ ರಾಜ್ಯವನ್ನು ಹಸಿವು ಮುಕ್ತ ಮಾಡಬಹುದೇ ಹೊರತು ಭಯ ಮುಕ್ತ ಮಾಡಲು ಸಾಧ್ಯವಾಗಲಿಲ್ಲ. ಇದು ಎಸ್‌ಡಿಪಿಐ ಯಿಂದ ಮಾತ್ರ ಸಾಧ್ಯ ಎಂಬ ಭರವಸೆಯಿಂದ ನಾವೆಲ್ಲರೂ ಈ ಬಾರಿ ಚುನಾವಣೆಯಲ್ಲಿ ಈ ಪಕ್ಷಕ್ಕೆ ಬೆಂಬಲಿಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಬಶೀರ್ ಕೊಲ್ನಾಡ್, ರಫೀಕ್ ಮಂಚಿ ಉಪಸ್ಥಿತರಿದ್ದರು. ಖಲಂದರ್ ಪರ್ತಿಪ್ಪಾಡಿ ಸ್ವಾಗತಿಸಿ, ನಿರೂಪಿಸಿದರು.







