ಎ. 13ರಿಂದ ಕರಿಂಕದಲ್ಲಿ 'ಕಲರವ' ಮಕ್ಕಳ ಬೇಸಿಗೆ ಶಿಬಿರ

ಬಂಟ್ವಾಳ, ಎ. 9: ಸಂಘಟನೆ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಂಸಾರ ಜೋಡುಮಾರ್ಗದ ಆಶ್ರಯದಲ್ಲಿ ಮೂರು ದಿನಗಳ ಮಕ್ಕಳ ಬೇಸಿಗೆ ಶಿಬಿರ 'ಕಲರವ-2018' ಎ. 13ರಿಂದ 15ರವರೆಗೆ ಮಾಣಿ ಅನಂತಾಡಿ ಸಮೀಪದ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀದೇವಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ.
8 ರಿಂದ 16 ವರ್ಷದೊಳಗಿನ ಆಸಕ್ತ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು. ರಂಗಾಯಣ ಧನರಾಜ್ ನಿರ್ದೇಶನದಲ್ಲಿ ನಡೆಯಲಿರುವ ಶಿಬಿರದಲ್ಲಿ, ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದ್ದು, ಹಾಡು, ಆಟ, ನಾಟಕ, ಗುಬ್ಬಚ್ಚಿ ಗೂಡು, ಫ್ಯಾಮಿಲಿ ಪವರ್, ಆರೋಗ್ಯ ಮಾಹಿತಿ, ಯಕ್ಷ ಹೆಜ್ಜೆಗಳು, ಭರತ ನಾಟ್ಯ, ಮುಖವರ್ಣಿಕೆ, ಮುಖವಾಡ, ಕರಕುಶಲ ಕಲೆ ಮೊದಲಾದ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯುವ ಶಿಬಿರವು ಸಂಪೂರ್ಣ ಉಚಿತವಾಗಿದ್ದು, ಪುತ್ತೂರು, ವಿಟ್ಲ, ಮಾಣಿ, ಅನಂತಾಡಿ ಆಸುಪಾಸಿನ ಊರುಗಳ ಆಸಕ್ತ ಮಕ್ಕಳು ಭಾಗವಹಿಸಬಹುದು. ಭಾಗವಹಿಸುವ ಮಕ್ಕಳು 9481017606 ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸುವಂತೆ ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





