ಮಡಿಕೇರಿ: ಕಾಂಗ್ರೆಸ್ ಬೂತ್ ಉಸ್ತುವಾರಿಯಾಗಿ ಗಿರೀಶ್ ಆಯ್ಕೆ

ಮಡಿಕೇರಿ, ಏ.9 : ಕೊಡಗು ಜಿಲ್ಲಾ ಕಾಂಗ್ರೆಸ್ ಬೂತ್ ಉಸ್ತುವಾರಿಯಾಗಿ ಕೊಲ್ಯದ ಗಿರೀಶ್ ಆಯ್ಕೆಯಾಗಿದ್ದಾರೆ.
2018ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ 530 ಮತಗಟ್ಟೆಗಳ ಉಸ್ತುವಾರಿಯಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಅರೆಭಾಷೆ ಅಕಾಡಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರನ್ನು ನೇಮಕ ಮಾಡಲಾಗಿದೆ.
ಕೆ.ಪಿ.ಸಿ.ಸಿ ಸೂಚನೆ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಮಾದಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ನೇಮಕಾತಿ ಆದೇಶವನ್ನು ಇಂದು ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಿ ಅನುಭವವಿರುವ ಗಿರೀಶ್ ಅವರ ಆಯ್ಕೆ ಸಮಯೋಚಿತವಾಗಿದೆ ಎಂದು ವೀಣಾ ಅಚ್ಚಯ್ಯ ಅವರು ಶುಭಕೊರಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನೀರ ಮೈನಾ, ತಾ.ಪಂ ಸದಸ್ಯರಾದ ಪಲ್ವಿನ್ ಪೂಣಚ್ಚ, ನಂದಿನೆರವಂಡ ಮಧು, ಎಪಿಎಂಸಿ ಸದಸ್ಯರಾದ ವಿ.ಎಲ್.ಸುರೇಶ್, ಚಟ್ಟಂಗಡ ಅಭಿನ್, ಎಂ.ಎಂ. ಹನೀಫ್ ಸೇರಿದಂತೆ ಪ್ರಮುಖರು ಈ ಸಂದರ್ಭ ಹಾಜರಿದ್ದರು.





