ವಿದ್ಯಾರ್ಥಿಗಳು ತೆರೆದ ಮನದವರಾಗಬೇಕು:ಡಾ.ಶಾಂತಾರಾಂ

ಮಣಿಪಾಲ, ಎ.9: ಮನೆಯೊಳಗೆ ಗಾಳಿ-ಬೆಳಕು ಆಡಬೇಕಾದರೆ ಮುಚ್ಚಿದ ಬಾಗಿಲು ಕಿಟಕಿಗಳನ್ನು ತೆರೆಯಲೇಬೇಕು. ಅದೇ ರೀತಿ ವಿದ್ಯಾರ್ಥಿಗಳು ತೆರೆದ ಮನದವರಾಗಬೇಕು. ಆಗ ಮಾತ್ರ ಪಡೆದುಕೊಂಡ ಜ್ಞಾನ ನಿಜವಾದ ಅರ್ಥದಲ್ಲಿ ಮನದಲ್ಲಿ ಬೇರೂರುತ್ತದೆ ಎಂದು ಮಣಿಪಾಲದ ಅಕಾಡಮಿ ಆಪ್ ಜನರಲ್ ಎಜ್ಯುಕೇಶನಿನ ಆಡಳಿತಾಧಿಕಾರಿ ಡಾ.ಶಾಂತರಾಮ್ ಹೇಳಿದ್ದಾರೆ.
ಭಾರತೀಯ ವಿಕಾಸ ಟ್ರಸ್ಟ್ ಮತ್ತು ಅಕಾಡಮಿ ಆಪ್ ಜನರಲ್ ಎಜ್ಯುಕೇಶನ್ ಇವರ ಜಂಟಿ ಆಶ್ರಯದಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಬಿವಿಟಿಯಲ್ಲಿ ಆಯೋಜಿಸಲಾದ ಆರು ದಿನಗಳ ಬೇಸಿಗೆ ರಜಾ ಶಿಬಿರದ ಸಮಾರೋಪ ಸಮಾರಂದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಪರ್ಧೆಗಳ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡುತಿದ್ದರು.
ಕರ್ನಾಟಕದ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞ ನುಡಿಯಂತೆ ‘ಸರ್ವಜ್ಞವನೆಂಬವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ’, ವಿದ್ಯಾರ್ಥಿಗಳು ಗುರುಮುಖೇನ ಕಲಿಯುವುದರ ಜೊತೆಗೆ ಜ್ಞಾನವನ್ನು ತಮ್ಮ ಸ್ವಂತ ಶಕ್ತಿಯಿಂದ ಮತ್ತು ಎಲ್ಲೆಡೆ ಯಿಂದ ಗ್ರಹಿಸುವ ಶಕ್ತಿಯನ್ನು ಹೊಂದಬೇು ಎಂದರು.
ಕರ್ನಾಟಕದ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞ ನುಡಿಯಂತೆ ‘ಸರ್ವಜ್ಞವನೆಂಬವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ’, ವಿದ್ಯಾರ್ಥಿಗಳು ಗುರುಮುಖೇನ ಕಲಿಯುವುದರ ಜೊತೆಗೆ ಜ್ಞಾನವನ್ನು ತಮ್ಮ ಸ್ವಂತ ಶಕ್ತಿಯಿಂದ ಮತ್ತು ಎಲ್ಲೆಡೆ ಯಿಂದ ಗ್ರಹಿಸುವ ಶಕ್ತಿಯನ್ನು ಹೊಂದಬೇಕು ಎಂದರು. ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ಮಾತನಾಡಿದರು.
ವಿದ್ಯಾರ್ಥಿಗಳು ಶಿಬಿರದ ಸಂಕ್ಷಿಪ್ತ ವರದಿಯೊಂದಿಗೆ ಶಿಬಿರ ದಲ್ಲಿ ತಮ್ಮ ವೈಯುಕ್ತಿಕ ಅನುಭವಗಳನ್ನೂ ಹಂಚಿಕೊಂಡರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿ, ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವಂದಿಸಿದರು.
ಶಿಬಿರದಲ್ಲಿ ಕೆ.ಎಂ.ಉಡುಪ, ಲಕ್ಷ್ಮೀಬಾಯಿ, ಪ್ರಕಾಶ್ ರಾವ್, ನರೇಂದ್ರ ಕೋಟ, ನಿತ್ಯಾನಂದ ಪಡ್ರೆ, ಡಾ.ಭಾರತಿ ಮರವಂತೆ, ಡಾ.ಚೈತನ್ಯ, ಡಾ. ಶ್ರೀಧರ ಬಾಯರಿ, ಶಾಂತರಾಜ ಐತಾಳ, ಕಾವೇರಿ, ಮನೋಹರ ಕಟ್ಗೇರಿ, ಆರೂರು ಮಂಜುನಾಥ ರಾವ್, ಗಣೇಶ ಗಂಗೊಳ್ಳಿ, ಬಿ.ಸಿ.ರಾವ್, ಸುಮಂಗಲ, ಡಾ.ಮೈನಾ, ಗುರುರಾಜ ಸನಿಲ್, ಶ್ರೀದೇವಿ, ಲಲಿತಾ ಸಂಪ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.







