ಅಕ್ರಮ ಮಧ್ಯ ಮಾರಾಟ: ಪ್ರಕರಣ ದಾಖಲು
ಮಲ್ಪೆ, ಎ.9: ಕಾನೂನು ಬಾಹಿರವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮಲ್ಪೆಯ ಬಾರೊಂದರ ಮೇಲೆ ಸೋಮವಾರ ದಾಳಿ ನಡೆಸಿದ ಚುನಾವಣಾಧಿ ಕಾರಿಗಳು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮಕ್ಕೆ ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್‌ಗೆ ಸಿಎಲ್ 7ರಡಿ ಲೈಸೆನ್ಸ್ ಪಡೆದು, ರೂಮ್‌ಗೆ ಮಾತ್ರ ಮಧ್ಯ ಮಾರಾಟ ಮಾಡಲು ಅವಕಾಶವಿದೆ. ಆದರೆ ಇವರು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಂತೆ (ಸಿಎಲ್ 9) ಮೂರು ಮಹಡಿಯಲ್ಲೂ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ವೀಡಿಯೊ ಚಿತ್ರೀಕರಣ ಮಾಡಿಕೊಂಡಿದ್ದು, ಅಬಕಾರಿ ಇಲಾಖೆಗೆ ಮುಂದಿನ ಕ್ರಮಕ್ಕೆ ತಿಳಿಸಲಾಗಿದೆ. ಇಲ್ಲಿ ಮದ್ಯ ಹಂಚಿ ಮತದಾರರನ್ನು ಓಲೈಕೆ ಮಾಡುವ ಸಾಧ್ಯತೆ ಇರುವುದರಿಂದ ಶಂಕಿತ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇದೇ ಆಧಾರದ ಮೇಲೆ ಈ ದಾಳಿ ನಡೆದಿದೆ ಎಂದು ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂವಿತಾ ತಿಳಿಸಿದ್ದಾರೆ.
Next Story





