ಕೇರಳ ಹರತಾಳ: ದಲಿತ ಮುಖಂಡ ಪೊಲೀಸ್ ಕಸ್ಟಡಿಗೆ

ತಿರುವನಂತಪುರಂ, ಎ.9: ಎಪ್ರಿಲ್ 2ರಂದು ಉತ್ತರ ಭಾರತದಾದ್ಯಂತ ನಡೆದಿದ್ದ ಪ್ರತಿಭಟನೆ ಸಂದರ್ಭ ದಲಿತ ಸಮುದಾಯದ ವಿರುದ್ಧ ಹಿಂಸಾಚಾರ ನಡೆದಿದೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸುಪ್ರೀಂಕೋರ್ಟ್ ದುರ್ಬಲಗೊಳಿಸಿದೆ ಎಂದು ಆರೋಪಿಸಿ ಕೇರಳದಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹರತಾಳ ನಡೆಸಲಾಯಿತು.
ರಾಜ್ಯದಾದ್ಯಂತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಪೊಲೀಸರ ಭದ್ರತೆಯಲ್ಲಿ ಸಂಚಾರ ನಡೆಸಿದವು. ಅಖಿಲ ಕೇರಳ ಚೆರಮಾರ್ ಹಿಂದೂ ಮಹಾಸಭಾ, ಸಿಎಸ್‌ಡಿಎಸ್, ರಾಷ್ಟ್ರೀಯ ದಲಿತ ವಿಮೋಚನಾ ರಂಗ, ಬಿಎಸ್ಪಿ, ದ್ರಾವಿಡ ವರ್ಗ ಐಕ್ಯ ಮನ್ನಣಿ ಮುಂತಾದ ಸಂಘಟನೆಗಳು ಹರತಾಳಕ್ಕೆ ಬೆಂಬಲ ಸೂಚಿಸಿದ್ದವು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ದಲಿತ ಮುಖಂಡನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





