ಬ್ಯಾಂಕ್ ಮಹಿಳಾ ಉದ್ಯೋಗಿ ನಾಪತ್ತೆ
ಮಂಗಳೂರು, ಎ.9: ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರು ನಾಪತ್ತೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಲ್ಕಿ ಸಮೀಪದ ಕೊಲ್ನಾಡ್‌ನ ಶ್ವೇತಾ (32) ಕಾಣೆಯಾದ ಮಹಿಳೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಕೊಲ್ನಾಡ್ ಶಾಖೆಯ ಉದ್ಯೋಗಿಯಾಗಿದ್ದ ಶ್ವೇತಾ ಎ.7ರಂದು ಮಧ್ಯಾಹ್ನ ಚೆಕ್ ಒಂದನ್ನು ಹಿಡಿದುಕೊಂಡು ಮಂಗಳೂರು ಹಂಪನಕಟ್ಟೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಶಾಖೆಗೆಂದು ಹೋದವರು ಕೊಲ್ನಾಡಿಗೆ ವಾಪಸಾಗಿಲ್ಲ ಎನ್ನಲಾಗಿದೆ.
ಹಂಪನಕಟ್ಟೆ ಐ.ಒ.ಬಿ. ಶಾಖೆಯ ಸಿ.ಸಿ. ಕ್ಯಾಮರಾ ಪರಿಶೀಲಿಸಿದಾಗ ಶ್ವೇತಾ ಈ ಬ್ಯಾಂಕಿಗೆ ಬಂದು ವಾಪಸ್ ಹೋಗಿರುವುದು ದಾಖಲಾಗಿದೆ. ಬ್ಯಾಂಕ್ ಶಾಖೆಯಿಂದ ಹೊರ ಬಂದವರು ಬಳಿಕ ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಶ್ವೇತಾ ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪತಿ ವಿದೇಶದಲ್ಲಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





