ಹರಪನಹಳ್ಳಿ: ಈಜಲು ಹೋದ ಬಾಲಕ ನೀರುಪಾಲು

ಹರಪನಹಳ್ಳಿ,ಎ.09 : ಈಜಲು ಹೋದ ಬಾಲಕನೊಬ್ಬ ನೀರುಪಾಲಾದ ಘಟನೆ ಸಮೀಪದ ಸಿದ್ದಾಪುರ ಕೆರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಪಟ್ಟಣದ ಉಪ್ಪಾರಗೆರೆ ನಿವಾಸಿ ಸಯ್ಯದ್ ಆಶಿಫ್ ಎಂಬುವವರ ಪುತ್ರ ಸಯ್ಯದ್ ಅಫಾನ್ (11) ಮೃತ ಬಾಲಕ. ಪಟ್ಟಣದ ನಿರ್ಮಲ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಸಯ್ಯದ್ ಶನಿವಾರ ಸಂಜೆ ಗೆಳೆಯರೊಂದಿಗೆ ಹಡಗಲಿ ರಸ್ತೆಯಲ್ಲಿರುವ ಸಿದ್ದಾಪುರ ಕೆರೆಗೆ ಈಜಲು ತೆರಳಿದ್ದಾಗ ಈ ಘಟನೆ ಜರುಗಿದೆ.
ನೀರುಪಾಲಾಗಿದ್ದ ಬಾಲಕನ ಮೃತದೇಹಕ್ಕಾಗಿ ಶನಿವಾರ ರಾತ್ರಿಯವರೆಗೂ ಶೋಧ ಕಾರ್ಯಾಚರಣೆ ನಡೆದಿತ್ತು. ಕತ್ತಲು ಆವರಿಸಿದ್ದರಿಂದ ಶೋಧ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಸ್ಥಳೀಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Next Story





