ಸಂಗೀತ ನಿರ್ದೇಶಕ ಹಂಸಲೇಖ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬೆಂಗಳೂರು, ಎ.10: ರಂಗಕರ್ಮಿ, ಸಂಗೀತ ನಿರ್ದೇಶಕ ಹಂಸಲೇಖ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಏರುಪೇರು ಕಂಡಬಂದ ಹಿನ್ನೆಲೆಯಲ್ಲಿ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗಳವಾರ ಚಿತ್ರೀಕರಣದ ನಡೆಯುತ್ತಿದ್ದ ಸಂದರ್ಭದಲ್ಲಿ ಹಂಸಲೇಖ ಸುಸ್ತಾದಂತೆ ಕಂಡುಬಂದರು. ಕೂಡಲೆ ಅವರನ್ನು ಕುಮಾರಸ್ವಾಮಿ ಬಡಾವಣೆಯ ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ಕುರಿತು ಹಂಸಲೇಖ ಪತ್ನಿ ಲತಾ ಪ್ರತಿಕ್ರಿಯಿಸಿ, ಹಂಸಲೇಖ ಪ್ರವಾಸದಲಿದ್ದರು. ಹೀಗಾಗಿ ಅವರಿಗೆ ಆಯಾಸವಾಗಿದೆ. ಗಂಭೀರವಾದಂತಹ ಯಾವುದೆ ಸಮಸ್ಯೆಯಿಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲವೆಂದು ತಿಳಿಸಿದರು.
Next Story





