ಬ್ಯಾರೀಸ್ ಕೋಡಿಯಲ್ಲಿ ಉಚಿತ ವಾಲಿಬಾಲ್ ತರಬೇತಿ ಶಿಬಿರ
ಕೋಡಿ, ಎ. 10: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಎ.16 ರಿಂದ ಮೇ1 ರವರೆಗೆ ಉಚಿತ ಬೇಸಿಗೆ ವಾಲಿಬಾಲ್ ತರಬೇತಿ ಶಿಬಿರವು ಪ್ರತಿದಿನ ಬೆಳಗ್ಗೆ 8.30 ರಿಂದ 11 ರವರೆಗೆ ಬ್ಯಾರೀಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, 14ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸುವುದು.
ಆಸಕ್ತ ವಿದ್ಯಾರ್ಥಿಗಳು ಎ.15ರ ಒಳಗಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಇಲಿಯಾಸ್ ಹಾಗೂ ಪ್ರೀತೇಶ್ ಶೆಟ್ಟಿ ಇವರಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





