Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 45 ಸೆಕೆಂಡುಗಳಲ್ಲಿ ಭಾಷಣ ಮುಗಿಸಬೇಕಾದ...

45 ಸೆಕೆಂಡುಗಳಲ್ಲಿ ಭಾಷಣ ಮುಗಿಸಬೇಕಾದ ವೇದಿಕೆಯಲ್ಲಿ 20 ನಿಮಿಷ ಚಪ್ಪಾಳೆ !

ಮಹಾನ್ ಕಲಾವಿದ ಚಾರ್ಲಿ ಚಾಪ್ಲಿನ್ ಗೆ ಆಸ್ಕರ್ ಗೌರವ ನೀಡುವಾಗ ಸಭಿಕರು ಪ್ರತಿಕ್ರಿಯಿಸಿದ್ದು ಹೀಗೆ

ವಾರ್ತಾಭಾರತಿವಾರ್ತಾಭಾರತಿ10 April 2018 10:43 PM IST
share
45 ಸೆಕೆಂಡುಗಳಲ್ಲಿ ಭಾಷಣ ಮುಗಿಸಬೇಕಾದ ವೇದಿಕೆಯಲ್ಲಿ 20 ನಿಮಿಷ ಚಪ್ಪಾಳೆ !

ಆಸ್ಕರ್ ಪ್ರಶಸ್ತಿ ಎಂದರೆ ಚಿತ್ರರಂಗದ ಪಾಲಿಗೆ ನೊಬೆಲ್ ಇದ್ದಂತೆ. ಅಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯುವುದೆಂದರೆ ಸಿನಿಮಾ ಜಗತ್ತಿನಲ್ಲೇ ಅದ್ವಿತೀಯ ಸಾಧನೆ ಮಾಡಿದ ಗೌರವ. ಆದರೆ ಅಷ್ಟು ದೊಡ್ಡ ಸಾಧನೆ ಮಾಡಿ ಆ ವೇದಿಕೆ ಏರಿ ಪ್ರಶಸ್ತಿ ಪಡೆಯುವವರಿಗೂ ಹಲವು ನೀತಿ, ನಿಯಮಗಳಿವೆ. ಪಡೆದಿದ್ದು ಭೂಲೋಕದ ಅತಿ ಪ್ರತಿಷ್ಠಿತ ಪ್ರಶಸ್ತಿಯಾದರೂ ಆತ ಅಥವಾ ಆಕೆ 45 ಸೆಕೆಂಡುಗಳೊಳಗೆ ತನ್ನ ಭಾಷಣ ಮುಗಿಸಬೇಕು ಎಂಬ ಅಲಿಖಿತ ನಿಯಮವಿದೆ. ಅದಾದ ಮೇಲೆ  ವಿಜೇತರಿಗೆ ಭಾಷಣ ನಿಲ್ಲಿಸುವಂತೆ ಸನ್ನೆ ಮಾಡಲಾಗುತ್ತದೆ. ತೀರಾ ಮುಂದುವರಿದರೆ ಧ್ವನಿ ವರ್ಧಕವನ್ನು ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಸಿನಿಮಾ ಜಗತ್ತಿನ ಮಹಾ ಕಲಾವಿದ, ಇಡೀ ಜಗತ್ತನ್ನು ನಕ್ಕು ನಲಿಸಿದ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ಗೆ ಆಸ್ಕರ್ ಗೌರವ ಪ್ರಶಸ್ತಿ ನೀಡಿದಾಗ ಏನಾಗಿತ್ತು ಗೊತ್ತೇ ?  45 ಸೆಕೆಂಡುಗಳಲ್ಲಿ ಭಾಷಣ ಮುಗಿಸಬೇಕು ಎಂದು ನಿಯಮವಿರುವ ಆ ವೇದಿಕೆಯಲ್ಲಿ ಸುಮಾರು 20 ನಿಮಿಷ ಸಭಿಕರು ಎದ್ದು ನಿಂತು ತಟ್ಟಿದ ಚಪ್ಪಾಳೆಗೆ ಕಿವಿಯಾದರು ಮಹಾನ್ ನಟ ಚಾರ್ಲಿ ಚಾಪ್ಲಿನ್ ! ಇನ್ನೊಂದು ವರದಿಯ ಪ್ರಕಾರ ಚಪ್ಪಾಳೆಯ ಒಟ್ಟು ಸಮಯ 12 ನಿಮಿಷಗಳು. 

ಚಪ್ಪಾಳೆಯೇ ಸುಮಾರು 20 ನಿಮಿಷ ಎಂದಾದರೆ ಚಾಪ್ಲಿನ್ ಭಾಷಣ ಎಷ್ಟು ಹೊತ್ತು ಇತ್ತು ಎಂದು ಅಚ್ಚರಿ ಪಡಬೇಡಿ. ಚಾಪ್ಲಿನ್ ಮಾತ್ರ ದೀರ್ಘ ಭಾಷಣ ಮಾಡಲಿಲ್ಲ. ತಮ್ಮ ಭಾಷಣಕ್ಕೆ ಮೊದಲು, ಭಾಷಣದ ನಡುವೆ ಮತ್ತು ಭಾಷಣದ ಬಳಿಕ ಸುದೀರ್ಘ ಕರತಾಡನಕ್ಕೆ ಸಾಕ್ಷಿಯಾದ ತೀವ್ರ ಭಾವುಕರಾದ ಚಾಪ್ಲಿನ್ ಅವರು ಹೇಳಿದ್ದಿಷ್ಟೇ : 
" Oh, thank you so much. This is an emotional moment for me, and words seem so futile, so feeble. I can only say thank you for the honor of inviting me here. And you're wonderful, sweet people. Thank you."

( ಓಹ್ , ಥಾಂಕ್ಯೂ ಸೋಮಚ್ , ಇದು ನನಗೆ ಅತ್ಯಂತ ಭಾವುಕ ಕ್ಷಣ.  ಈಗ ಪದಗಳು ವ್ಯರ್ಥ ಹಾಗು ಸವಕಲಾ ದಂತೆ ಭಾಸವಾಗುತ್ತಿದೆ.  ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಥ್ಯಾಂಕ್ಯೂ ಎಂದಷ್ಟೇ ಹೇಳಬಲ್ಲೆ. ನೀವೆಲ್ಲ ಇಂತಹ ಅದ್ಭುತ , ಸ್ವೀಟ್ ಜನರು. ಥಾಂಕ್ಯೂ.)

ಇದು ನಡೆದಿದ್ದು 1972, ಎ. 10 ರಂದು ನಡೆದ  ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ. ಆಗಷ್ಟೇ ತಮ್ಮ 20 ವರ್ಷಗಳ ದೇಶಭ್ರಷ್ಟ ಜೀವನ ಮುಗಿಸಿ ಚಾಪ್ಲಿನ್ ಅಮೆರಿಕಕ್ಕೆ ಹಿಂದುರುಗಿದ್ದರು. 1952 ರಲ್ಲಿ  ಕಮ್ಯುನಿಸ್ಟ್ ಬೆಂಬಲಿಗ ಎಂಬ ಹಣೆಪಟ್ಟಿ ಹಚ್ಚಿ ಯುರೋಪ್ ಪ್ರವಾಸದಲ್ಲಿದ್ದ ಅವರನ್ನು ದೇಶಕ್ಕೆ ಹಿಂದಿರುಗದಂತೆ ಮಾಡಲಾಗಿತ್ತು. ಹಾಗಾಗಿ ಅವರು ಸ್ವಿಟ್ಝರ್ ಲ್ಯಾನ್ಡ್ ನಲ್ಲಿ ನೆಲೆಸಿದ್ದರು. ಕೊನೆಗೆ ಎ. 2, 1972 ರಂದು ಗೌರವ ಆಸ್ಕರ್ ಪ್ರಶಸ್ತಿ ಸ್ವೀಕರಿಸಲು ಅಮೆರಿಕಕ್ಕೆ ಬರಲು ಅವರಿಗೆ ಅನುಮತಿ ನೀಡಲಾಯಿತು.

ಅಂದ ಹಾಗೆ, 1929 ರಲ್ಲೂ ಚಾಪ್ಲಿನ್ ಗೆ ದಿ ಸರ್ಕಸ್ ಚಿತ್ರಕ್ಕಾಗಿ ಗೌರವ ಆಸ್ಕರ್ ನೀಡಲಾಗಿತ್ತು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X