ಚಿನ್ನಕ್ಕೆ ಗುರಿಯಿಟ್ಟ ಹೀನಾ ಸಿಧು
ಆಸ್ಟ್ರೇಲಿಯದ ಗೋಲ್ಡ್ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ 6ನೇ ದಿನವಾದ ಮಂಗಳವಾರ ಭಾರತದ ಶೂಟರ್ ಹೀನಾ ಸಿಧು ಶೂಟಿಂಗ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಜಮೆ ಮಾಡಿದರು. ಭಾರತ ಪಡೆದ ಚಿನ್ನದ ಪದಕಗಳ ಸಂಖ್ಯೆ 11ಕ್ಕೇರಿದೆ. 11 ಚಿನ್ನ , 4 ಬೆಳ್ಳಿ ಮತ್ತು 6 ಕಂಚು ಪಡೆದಿರುವ ಭಾರತ ಪದಕ ಪಟ್ಟಿಯಲ್ಲಿ ಸತತ ಎರಡನೇ ದಿನವೂ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
Next Story