Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಿ.ಟಿ.ರವಿ ಸುಳ್ಳಿನ ಕಂತೆಗೆ ಸೋಲು, ಗೌರಿ...

ಸಿ.ಟಿ.ರವಿ ಸುಳ್ಳಿನ ಕಂತೆಗೆ ಸೋಲು, ಗೌರಿ ಹೋರಾಟಕ್ಕೆ ಜಯ: ಕೋಸೌವೇ

ಬಾಬಾಬುಡಾನ್‍ಗಿರಿ ವಿವಾದದ ಬಗ್ಗೆ ಸುಪ್ರೀಂ ತೀರ್ಪು

ವಾರ್ತಾಭಾರತಿವಾರ್ತಾಭಾರತಿ11 April 2018 5:21 PM IST
share
ಸಿ.ಟಿ.ರವಿ ಸುಳ್ಳಿನ ಕಂತೆಗೆ ಸೋಲು, ಗೌರಿ ಹೋರಾಟಕ್ಕೆ ಜಯ: ಕೋಸೌವೇ

ಚಿಕ್ಕಮಗಳೂರು, ಎ.11: ದತ್ತಪೀಠ ಎಂಬುದು ಸಂಘಪರಿವಾರದವರ ಕಟ್ಟುಕತೆಯಾಗಿದ್ದು, ಇದು ಸಂಘ ಪರಿವಾರದವರ ಸೃಷ್ಟಿಯಾಗಿದೆ. ಇದು ಹಿಂದೂ-ಮುಸಲ್ಮಾನರ ಸಾಮರಸ್ಯದ ಧಾರ್ಮಿಕ ಕೇಂದ್ರವಾಗಿದೆ. ಈ ವಿವಾದ ಸಂಬಂಧ ಸುಪ್ರೀಕೋರ್ಟ್‍ನ ಇತ್ತೀಚೆಗೆ ನೀಡಿದ ತೀರ್ಪು ಕರ್ನಾಟಕದ ಜಾತ್ಯತೀತ ಪರಂಪರೆಗೆ ಸಿಕ್ಕಿರುವ ದಿಗ್ವಿಜಯವಾಗಿದೆ. ಈ ಮೂಲಕ ಸೌಹಾರ್ದ ಪ್ರಿಯರು ನಡೆಸಿದ ದಶಕಗಳ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಬಲಪಂಥೀಯರ ಷಡ್ಯಂತ್ರಗಳಿಗೆ ತಕ್ಕ ಉತ್ತರವಾಗಿ ನ್ಯಾಯಾಲಯದಲ್ಲಿ ಸಿಕ್ಕ ಈ ಜಯದ ರೂವಾರಿ ಪತ್ರೆಕರ್ತೆ ಗೌರಿ ಲಂಕೇಶ್ ಆಗಿದ್ದಾರೆ. ಈ ಜಯವನ್ನು ಅವರಿಗೆ ಅರ್ಪಿಸುವುದಾಗಿ ಕೋಮುಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಾನು ಗೌರಿ ಕಾರ್ಯಕ್ರಮದ ಕರಪತ್ರಗಳ ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು, ಗುರುದತ್ತಾತ್ರೇಯ ಬಾಬಾಬುಡಾನ್ ದರ್ಗಾದ ವಿವಾದ ಸಂಬಂಧ ಇತ್ತೀಚೆಗೆ ರಾಜ್ಯ ಸರಕಾರ ನಾಗಮೋಹನ್‍ದಾಸ್ ಸಮಿತಿಯ ವರದಿಗೆ ಅನುಮೋದನೆ ನೀಡಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದನ್ನು ಉಚ್ಚ ನ್ಯಾಯಾಲಯ ಮಾನ್ಯ ಮಾಡಿದ್ದು, ಅದರಂತೆ ಬಾಬಾಬುಡನ್ ದರ್ಗಾದಲ್ಲಿ 1898ರ ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಧಾರ್ಮಿಕ ಆಚರಣೆಗಳು ನಡೆಯಬೇಕಿದೆ ಎಂದ ಅವರು, ಸಮಿತಿಯು ಸರಕಾರಕ್ಕೆ ನೀಡಿದ ವರದಿಯೂ ಏಕಪಕ್ಷೀಯವಾಗಿದೆ ಎಂಬುದು ಹಸಿ ಸುಳ್ಳಾಗಿದೆ. ಸಮಿತಿಯ ಸದಸ್ಯರಾದ ನಾಗಮೋಹನ್‍ದಾಸ್, ರಹಮತ್‍ತರೀಕೆರೆ ಹಾಗೂ ಶೆಟ್ಟರ್ ಬಾಬಾಬುಡನ್ ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅಧ್ಯಯನ ಮಾಡಿದೆ. ಚಾರಿತ್ರಿಕ, ಐತಿಹಾಸಿ ದಾಖಲೆಗಳು, ವಿಶ್ವವಿದ್ಯಾನಿಲಯಗಳ ದಾಖಲೆಗಳು ಹಾಗೂ ಜನರ ವಾದಗಳನ್ನು ಆಲಿಸಿದೆ. ವೇದಿಕೆ ವತಿಯಿಂದಲೂ ಸಮಿತಿ ಮುಂದೆ ದಾಖಲೆ ಸಹಿತ ವಾದ ಮಂಡಿಸಿದ್ದೇವೆ. ಇವೆಲ್ಲವನ್ನೂ ಪರಿಶೀಲಿಸಿ ಸಮಿತಿ ಸದಸ್ಯರ ಪೂರ್ವಾಗ್ರಹ ಪೀಡಿತವಲ್ಲದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದರು.

ಬಲಪಂಥೀಯರು ಹಾಗೂ ಪಟ್ಟಭದ್ರಹಿತಾಸಕ್ತಿಗಳು ಬಾಬಾಬುಡನ್ ದರ್ಗಾವನ್ನು ದತ್ತಪೀಠ ಎಂದು ತಿರುಚಿ ಯುವಜನರಲ್ಲಿ ದ್ವೇಷದ ವಿಷ ಬೀಜಬಿತ್ತಿದ್ದರು. ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ದತ್ತಪೀಠ ಎಂದು ಸುಳ್ಳು ಹೇಳುತ್ತಲೇ ಸಮಾನಮನಸ್ಕರ ಕಾನೂನು ಹೋರಾಟವನ್ನು ಸೋಲಿಸಲು ಪ್ರಯತ್ನಿಸಿದರು. ಇದನ್ನು ರಾಜಕೀಯಕ್ಕೆ ಬಳಸಿಕೊಂಡು ಯಶಸ್ವಿಯಾದ ರವಿ ಅವರು ರಾಜಕೀಯ ಅಧಿಕಾರವನ್ನೂ ಗಳಿಸಿದರು ಎಂದು ಟೀಕಿಸಿದ ಅಶೋಕ್, ನ್ಯಾಯಾಲಯದಲ್ಲಿ ರವಿ ಅವರ ಸುಳ್ಳಿನ ಕಂತೆಗಳಿಗೆ ಸೋಲಾಗಿದ್ದು, ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ಮುಂದುವರಿಯುವ ನಿಟ್ಟಿನಲ್ಲಿ ಸಿ.ಟಿ.ರವಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಸೊಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾಯಾಲಯದ ತೀರ್ಪಿನ ಪ್ರಕಾರ ಬಾಬಾಬುಡನ್ ದರ್ಗಾದಲ್ಲಿ ಸೂಫಿ ಪರಂಪರೆ ಯಾವುದೇ ಬೇಧಭಾವಗಳಿಲ್ಲದೇ ಆಚರಣೆಗೆ ಬರಲಿದೆ. ದರ್ಗಾಕ್ಕೆ 365 ದಿನಗಳ ಕಾಲವೂ ಹಿಂದೂ-ಮುಸಲ್ಮಾನರು ಬೇಧ ಭಾವವಿಲ್ಲದೇ ಹೋಗಬಹುದು. ಶಾಖಾದ್ರಿ ಅವರು ದರ್ಗಾದ ಆಡಳಿತದ ಉಸ್ತುವಾರಿ ನಡೆಸಲಿದ್ದು, ಶಾಖಾದ್ರಿ ನೇಮಿಸಿದ ಮುಜಾವರ್ ದರ್ಗಾದಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುತ್ತಾರೆ. ದರ್ಗಾದ ಆವರಣದಲ್ಲಿರುವ ಗೋರಿಗಳ ತೆರವು, ಹಿಂದೂ ಅರ್ಚಕರ ನೇಮಕವಾಗಬೇಕೆಂಬ ಸಂಘಪರಿವಾರದವರ ವಾದಕ್ಕೆ ನ್ಯಾಯಾಲಯಕ್ಕೆ ಹಿನ್ನಡೆಯಾಗಿದೆ ಎಂದ ಅವರು, ದೇಶದಲ್ಲಿ ಸಾಮರಸ್ಯಕ್ಕೆ ಹೆಸರಾದ ಧಾರ್ಮಿಕ ಕೇಂದ್ರಗಳ ಒಡೆತನ, ಜಾಗಕ್ಕೆ ಸಂಬಂಧಿಸಿದಂತೆ ವಿವಾದಗಳು ಉದ್ಭವಿಸಿದಾಗ 1947ರ ಪಾರ್ಲಿಮೆಂಟ್ ಆಕ್ಟ್ ಪ್ರಕಾರ 1947ಕ್ಕೂ ಹಿಂದಿನ ಆಚರಣೆಗಳನ್ನು ಅಂತಹ ಧಾರ್ಮಿಕ ಕೇಂದ್ರಗಳಲ್ಲಿ ನಡೆಸಬೇಕೆಂದು ಆಕ್ಟ್‍ ನಲ್ಲಿ ತಿಳಿಸಿದೆ. ಈ ಪಾರ್ಲಿಮೆಂಟ್ ಆಕ್ಟ್  ಬಾಬಾಬುಡನ್ ದರ್ಗಾಕ್ಕೆ ಅನ್ವಯವಾಗುತ್ತದೆ. ನ್ಯಾಯಾಲಯ ಈ ನಿಟ್ಟಿನಲ್ಲಿ ಮಾದರಿಯಾದ ತೀರ್ಪು ನೀಡಿದ್ದು, ಜನತೆ ನೀಡಿದ ಹಣದಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗಿದೆ. ಕೇವಲ 60 ಸಾವಿರ ರೂ. ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್‍ಮೊಹಿದ್ದೀನ್, ಜಿಲ್ಲಾಧ್ಯಕ್ಷ ಹಸನಬ್ಬ, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಮುನೀರ್ ಉಪಸ್ಥಿತರಿದ್ದರು.

ಸಂಘಪರಿವಾರ, ಬಿಜೆಪಿ ಮುಖಂಡರು ಪುರಾಣಗಳ ಕಟ್ಟುಕತೆಗಳನ್ನೇ ನಿಜವೆಂದು ಬಿಂಬಿಸಿ ಯುವಜನರನ್ನು ದಾರಿತಪ್ಪಿಸುತ್ತಿದ್ದಾರೆ. ಕೋಮುಭಾವನೆಗಳನ್ನು ಉದ್ರೇಕಗೊಳಿಸುತ್ತಿದ್ದಾರೆ. ಸಂಘಪರಿವಾರ, ಬಿಜೆಪಿ ಮುಖಂಡರಿಗೆ ಹಿಂದುತ್ವದ ಬಗ್ಗೆ ನಿಜವಾಗಿಯೂ ಶ್ರದ್ಧಾಭಕ್ತಿ ಇಲ್ಲ. ಅವರಿಗೆ ನಿಜವಾಗಿಯೂ ಕಾಳಜಿ ಇದ್ದಲ್ಲಿ ಅಸ್ತಿತ್ವದಲ್ಲಿರದ ದತ್ತ ಜಯಂತಿ, ಶೋಭಾಯಾತ್ರೆಯಂತಹ ಸೌಹಾರ್ದ ಕದಡುವ ಆಚರಣೆಗಳನ್ನು ಕೈಬಿಟ್ಟು ಉದ್ಯೋಗ ಸೃಷ್ಟಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹೋರಾಡಲಿ.

-ಕೆ.ಎಲ್.ಅಶೋಕ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X