ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ: ಸಂಜೀವ್‌ಕುಮಾರ್

ಬೆಂಗಳೂರು, ಎ.11: ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಲಾಗಿರುವ 1156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1255 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ 12,537 ಗೋಡೆಬರಹಗಳು, 17,693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದು ಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದ್ದಾರೆ.
ಖಾಸಗಿ ಜಾಗಗಳಲ್ಲಿ ಒಟ್ಟಾರೆ 6866 ಗೋಡೆ ಬರಹ, 7949 ಪೋಸ್ಟರ್‌ಗಳು ಮತ್ತು 2543 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದು ಹಾಕಲಾಗಿದೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ 9.12 ಲಕ್ಷ ರೂ.ಗಳ ನಗದು, 1.70 ಕೋಟಿ ರೂ.ಮೌಲ್ಯದ 7 ಕೆಜಿ 303 ಗ್ರಾಂ ಚಿನ್ನ, 11.47 ಲಕ್ಷ ರೂ.ಮೌಲ್ಯದ ಬೆಳ್ಳಿ, 54 ಸೀರೆ, 9 ಲಕ್ಷ ರೂ.ಮೊತ್ತದ 2 ವಾಹನಗಳನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು 4.79 ಲಕ್ಷ ರೂ.ನಗದು, 16,132 ರೂ.ವೌಲ್ಯದ 50.140 ಲೀ ಮದ್ಯ, 1.38 ಲಕ್ಷ ರೂ.ಮೌಲ್ಯದ ಎರಡು ವಾಹನ ಮತ್ತು ಕುಕ್ಕರ್ ಬಾಕ್ಸ್‌ಗಳನ್ನು ಮತ್ತು 10 ಸಾವಿರ ರೂ.ಮೌಲ್ಯದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್‌ಕುಮಾರ್ ತಿಳಿಸಿದ್ದಾರೆ.
1293 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 1079 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. ಹಾಗೂ 1864 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 629 ಪ್ರಕರಣಗಳನ್ನು, 858 ನಾಕಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ, 63,178 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 4 ಶಸ್ತ್ರಾಸ್ತ್ರದ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಒಟ್ಟು 95329 ಶಸ್ತ್ರಾಸ್ತ್ರಗಳ ಪೈಕಿ 94455 ಶಸ್ತ್ರಾಸ್ತ್ರಗಳನ್ನು ಈವರೆಗೆ ದಾಸ್ತಾನು ಮಾಡಿಕೊಳ್ಳಲಾಗಿದೆ. 50 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿಯಲ್ಲಿ 10,537 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 8840 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 17,917 ಜಾಮೀನು ರಹಿತ ವಾರೆಂಟ್‌ಗಳನ್ನು ಈವರೆಗೆ ಹೊರಡಿಸಲಾಗಿದೆ ಎಂದು ಸಂಜೀವ್‌ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







