ಪ್ರಸಂಗಕರ್ತ ಅಗರಿ ಭಾಸ್ಕರ ರಾಯರಿಗೆ ಸಮ್ಮಾನ

ಉಡುಪಿ, ಎ.11: ಕಡೆಕಾರು ಕಿದಿಯೂರಿನ ಶ್ರೀಬ್ರಹ್ಮ ಬೈದರ್ಕಳ ಧೂಮಾವತಿ ಕಲಾ ಮಂಡಳಿಯ 54ನೇ ವಾರ್ಷಿಕೋತ್ಸವವು ಇತ್ತೀಚೆಗೆ ಕಿದಿಯೂರು ಗರೋಡಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಯಕ್ಷಗಾನ ಪ್ರಸಂಗಕರ್ತ ಅಗರಿ ಭಾಸ್ಕರ ರಾಯರನ್ನು ಸನ್ಮಾನಿಸಲಾಯಿತು. ಅಚ್ಯುತ ಅಮೀನ್ ಅವರ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಂಗಾಧರ ಜಿ. ಕಡೆಕಾರು, ತ್ರಿಕಣ್ಣೇಶ್ವರೀ ಪತ್ರಿಕೆಯ ಸಂಪಾದಕ ಪಿ.ತೇಜೇಶ್ವರ ರಾವ್, ಸಂಘದ ಗುರುಗಳಾದ ತೋನ್ಸೆ ಜಯಂತ ಕುಮಾರ್, ಜಯಶೀಲ ಕಿದಿಯೂರು, ಕೆ.ರಾಮ್‌ಪಾಲ್, ಚಂದ್ರಕಾಂತ ಕಿದಿಯೂರು, ಜಯಶೀಲ ಕಡೆಕಾರ್, ಸತೀಶ ಕಿದಿಯೂರು, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಅಗರಿ ಭಾಸ್ಕರರಾಯರಿಂದ ರಚಿಸಲ್ಪಟ್ಟ ಶ್ರೀತ್ರಿಕಣ್ಣೇಶ್ವರೀ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನವು ತೋನ್ಸೆ ಜಯಂತ ಕುಮಾರ್ ನಿರ್ದೇಶನದಲ್ಲಿ ಯಶಸ್ವಿಯಾಗಿ ಜರಗಿತು.
Next Story





