ಉಡುಪಿ: ಪ್ರಥ್ವಿರಾಜ್ ಪುರಾಣಿಕ್‌ಗೆ ಡಾಕ್ಟರೇಟ್

ಉಡುಪಿ, ಎ.11: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಮಕ್ಕಳ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಪ್ರಥ್ವಿರಾಜ್ ಪುರಾಣಿಕ್ ಮಂಡಿಸಿದ ‘ಸ್ಟಡಿ ಆನ್ ದಿ ಟೆರಾಟೋಜನಿಕ್ ಇಪೆಕ್ಟ್ ಆಪ್ ಗರ್ಭಾಚಿಂತಾಮಣಿ ರಸ ಇನ್ ಮದರ್ ಆಲ್ಬಿನೊ ರಾಟ್ಸ್ ಆ್ಯಂಡ್ ಓಪ್‌ಸ್ಪ್ರಿಂಗ್’ ಎಂಬ ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ.ವಿ.ಎನ್.ಕೆ.ಉಷಾ ಅವರ ಮಾರ್ಗದರ್ಶನದಲ್ಲಿ ಪಿ.ಎಚ್‌ಡಿ ಅಧ್ಯಯನ ಮತ್ತು ಮಹಾಪ್ರಬಂಧ ಮಂಡಿಸಿರುವ ಇವರು, ಕೊಪ್ಪ ಎ.ಎಲ್.ಎನ್.ರಾವ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ಪದವಿ ಪಡೆದು, ಕೇರಳ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ದಿ.ಗಣಪತಿ ಪುರಾಣಿಕ್ ಮತ್ತು ಜಾನಕಿ ಪುರಾಣಿಕ್ ದಂಪತಿಯ ಪುತ್ರರಾಗಿದ್ದಾರೆ.
Next Story





