ಕ್ಷಿಪಣಿಗಳು ಬರುತ್ತಿವೆ: ರಶ್ಯಕ್ಕೆ ಎಚ್ಚರಿಕೆ ನೀಡಿದ ಟ್ರಂಪ್

ವಾಶಿಂಗ್ಟನ್, ಎ. 11: ಸಿರಿಯದಲ್ಲಿ ನಾಗರಿಕರ ಮೇಲೆ ರಾಸಾಯನಿಕ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಕ್ಷಿಪಣಿಗಳು ಬರಲಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಿರಿಯಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಿರಿಯ ಮೇಲಿನ ಆಕ್ರಮಣದ ವಿರುದ್ಧ ರಶ್ಯ ನೀಡಿರುವ ಎಚ್ಚರಿಕೆಯನ್ನು ಧಿಕ್ಕರಿಸಿರುವ ಟ್ರಂಪ್, ‘‘ಸಿರಿಯದತ್ತ ಹಾರಿಸಲಾಗುವ ಯಾವುದೇ ಅಥವಾ ಎಲ್ಲ ಕ್ಷಿಪಣಿಗಳನ್ನು ಹೊಡೆದುರುಳಿಸುವುದಾಗಿ ರಶ್ಯ ಎಚ್ಚರಿಸಿದೆ. ತಯಾರಾಗಿರು ರಶ್ಯ, ಕ್ಷಿಪಣಿಗಳು ಬರುತ್ತಿವೆ. ಹೊಸ ಹಾಗೂ ಚಂದದ ಕ್ಷಿಪಣಿಗಳು! ತನ್ನದೇ ಜನರನ್ನು ಕೊಂದು ಆನಂದಿಸುವ ವ್ಯಕ್ತಿಗಳ ಜೊತೆಗೆ ನೀವು ಸೇರಬಾರದಿತ್ತು’’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
Next Story





