ಹೆಬ್ರಿ: ಭಾರೀ ಗಾಳಿ, ಮಳೆ, ಸಿಡಿಲು; ಮರ ಉರುಳಿ 4 ವಾಹನ ಜಖಂ

ಹೆಬ್ರಿ, ಎ.11: ಹೆಬ್ರಿ ಪರಿಸರದಲ್ಲಿ ಬುಧವಾರ ಸಂಜೆ ಸಿಡಿಲು ಸಹಿತ ಗಾಳಿ ಮಳೆ ಜೋರಾಗಿ ಸುರಿದಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ಸೆಕೆ ಹಾಗೂ ಬಿಸಿಲಿನ ದಗೆಯಿಂದ ಕಂಗೆಟ್ಟಿದ್ದ ಜನತೆ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು.
ಜೋರಾಗಿ ಬೀಸಿದ ಗಾಳಿಯಿಂದಾಗಿ ಹೆಬ್ರಿ ತಾಲೂಕು ಕಛೇರಿಯ ಎದುರು ಸರಕಾರಿ ಮಾದರಿ ಶಾಲೆಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರವೊಂದು ಉರುಳಿಬಿದ್ದು 4 ವಾಹನಗಳು ಜಖಂಗೊಂಡಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳೀಯರು ಮರವನ್ನು ತೆರವುಗೊಳಿಸಲು ಸಹಕರಿಸಿದರು. ಹೆಬ್ರಿಯ ವಿವಿದೆಡೆಯೂ ಸಿಡಿಲು ಸಹಿತ ಗಾಳಿ ಮಳೆಯಾದ ಬಗ್ಗೆ ವರದಿಗಳು ಬಂದಿವೆ.
Next Story





