ಯೆನೆಪೊಯ: ‘ಎಸ್ಥೆಟಿಕ್ ಕ್ರೌನ್ ಇನ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ’ ಕಾರ್ಯಾಗಾರ

ಮಂಗಳೂರು, ಎ. 11: ಯೆನೆಪೊಯ ವೈದ್ಯಕೀಯ ದಂತ ಚಿಕಿತ್ಸಾ ಕಾಲೇಜು, ಪೀಡೋಡೊಂಟಿಕ್ಸ್ ಮತ್ತು ಪ್ರಿವೆಂಟಿವ್ ವಿಭಾಗದ ವತಿಯಿಂದ ‘ಎಸ್ಥೆಟಿಕ್ ಕ್ರೌನ್ ಇನ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ’ ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
105 ಅಭ್ಯರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಡಾ. ಶ್ರೀಕುಮಾರ್ ಮೆನನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಂತ ವೈದ್ಯಕೀಯ ಕಾಲೇಜಿನ ಪಾಂಶುಪಾಲ ಡಾ. ಬಿ. ಎಚ್. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ದಂತ ವಿಭಾಗದ ಮುಖ್ಯಸ್ಥ ಮತ್ತು ಸಂಘಟನಾ ಅಧ್ಯಕ್ಷ ಡಾ. ಶ್ಯಾಮ್ ಎಸ್. ಭಟ್ ಸ್ವಾಗತಿಸಿದರು.
ಡಾ. ಅಜಯ್ ರಾವ್ ವಂದಿಸಿದರು.ಡಾ. ಸಂದೀಪ್ ಹೆಗ್ದೆ ಕೆ., ಡಾ. ರೊಹನ್ ಭಟ್ ಉಪಸ್ಥಿತರಿದ್ದರು.
Next Story





