‘ನಿಮ್ಮಿಂದ ಇನ್ನೊಂದು ಜೀವ ಉಳಿಯಲಿ’: ಕಾಪುನಲ್ಲಿ ರಕ್ತದಾನ ಶಿಬಿರ

ಕಾಪು, ಎ.11: ‘ನಿಮ್ಮಿಂದ ಇನ್ನೊಂದು ಜೀವ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಎಸ್.ವೈ.ಎಸ್., ಎಸ್.ಜೆ.ಎಂ., ಎಸ್ಸೆಸ್ಸೆಫ್ ಕಾಪು ವಲಯ ಇದರ ವತಿಯಿಂದ ರಕ್ತನಿಧಿ ವಿಭಾಗ ಜಿಲ್ಲಾಸ್ಪತ್ರೆ ಉಡುಪಿ ಇವರ ಸಹಭಾಗಿತ್ವದೊಂದಿಗೆ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರವು ಕಾಪುವಿನ ಜೇಸಿಐ ಭವನದಲ್ಲಿ ನಡೆಯಿತು.
ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಸಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಚಾಲನೆ ನೀಡಿದರು. ಎಸ್.ಎಂ.ಎ. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ಅಬ್ದುರ್ರಶೀದ್ ಕಾಮಿಲ್ ಸಖಾಫಿ ಮಜೂರು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಇಹ್ಸಾನ್ ಜನರಲ್ ಕನ್ವೀನರ್ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಎ. ಬಾವ ಹಾಜಿ ಮುಳೂರು, ಎಸ್.ಎಂ.ಎ. ಕಾಪು ರೀಜನಲ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ಹಮೀದ್ ಮಜೂರು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಮಾತನಾಡಿದರು.
ಸುನ್ನೀ ವಿದ್ವಾಂಸ ಒಕ್ಕೂಟದ ಸದಸ್ಯ ಅಲ್ಹಾಜ್ ಪಿ.ಬಿ. ಅಹ್ಮದ್ ಮುಸ್ಲಿಯಾರ್, ಕಾಪು ಜಾಮಿಅ ಮಸ್ಜಿದ್ ಖತೀಬ್ ಮುಹಮ್ಮದ್ ಇರ್ಷಾದ್ ಸಅದಿ, ಎಸ್.ವೈ.ಎಸ್. ರಾಜ್ಯ ಉಪಾಧ್ಯಕ್ಷ ಮುಹಿಯ್ಯುದ್ದೀನ್ ಹಾಜಿ ಗುಡ್‌ವಿಲ್, ಎಸ್.ವೈಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಹಂಝತ್ ಹೆಜಮಾಡಿ, ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷ ಮುಹಿಯ್ಯುದ್ದೀನ್ ಸಖಾಫಿ, ಎಸ್.ಜೆ.ಎಂ. ಕಾಪು ರೇಂಜ್ ಅಧ್ಯಕ್ಷ ಅಬ್ದುರ್ರಝಾಖ್ ಅಲ್-ಖಾಸಿಮಿ, ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗ ಮುಖ್ಯಸ್ಥೆ ವೀಣಾ ಕುಮಾರಿ, ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಹನೀಫಿ, ಶಿರ್ವ ಸೆಕ್ಟರ್ ಅಧ್ಯಕ್ಷ ಸಲೀಮ್ ಪಕೀರ್ಣಕಟ್ಟೆ, ಎಸ್.ವೈ.ಎಸ್. ಕಾಪು ಸೆಂಟರ್ ಕೋಶಾಧಿಕಾರಿ ಕರೀಮ್ ಹಾಜಿ, ನಿರ್ವಹಣಾ ಸಮಿತಿ ಕೋಶಾಧಿಕಾರಿ ಅಬ್ದುಲ್ಲಾ ಹಾಜಿ ಮುಳೂರು ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಕ್ತದಾನ ನಿರ್ವಹಣಾ ಸಮಿತಿ ಚಯರ್‌ಮ್ಯಾನ್ ಕೆ.ಎಂ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಎಂ.ಕೆ. ಇಬ್ರಾಹೀಂ ಮಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ವೈ.ಎಸ್. ಪ್ರಧಾನ ಕಾರ್ಯದರ್ಶಿ ಎಂ.ಪಿ. ಯಾಕೂಬ್ ಸಖಾಫಿ ವಂದಿಸಿದರು.







