ವಿಧಾನ ಸಭಾ ಚುನಾಣೆ ;ದ.ಕ ಜಿಲ್ಲೆಗೆ ಸಿಆರ್‌ಪಿಎಫ್ ಜವಾನರ ಆಗಮನ
ಮಂಗಳೂರು, ಎ.11: ಚುನಾವಣಾ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ 360 ಜವಾನರು ಹಾಗೂ ಕೇಂದ್ರ ಶಸ್ತ್ರ ಪೊಲೀಸ್ ಪಡೆಯ 180 ಜವಾನರು ಸೇರಿದಂತೆ ಕರಾವಳಿಗೆ 800ಕ್ಕೂ ಅಧಿಕ ಸಿಬ್ಬಂದಿಗಳು ಆಗಮಿಸಿ ವಿವಿಧ ತಾಲೂಕುಗಳಲ್ಲಿ ನಿಯೋಜನೆಗೊಂಡಿ ಇಂದಿನಿಂದ ಕರ್ತವ್ಯ ನಿರ್ವಹಿಸಲಿದ್ದಾರೆ.
ನಿರ್ಭೀತವಾದ ರೀತಿಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾದ ಮತದಾನ ನಡೆಯಲು ಜನರಲ್ಲಿ ವಿಶ್ವಾಸ ಮುಡಿಸುವ ದೃಷ್ಟಿಯಿಂದ ಜಿಲ್ಲೆಗೆ ಆಗಮಿಸಿರುವ ಜವಾನರ ಪಡೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ,ಕಣ್ಗಾವಲು ,ಚುನಾವಣಾ ಸಂಚಾರಿ ತಂಡಗಳಿಗೆ ಸಹಕಾರ ನೀಡಲಿದೆ.
ಚುನಾವಣೆಯ ದಿನ ಮತ್ತು ಮತೆಣಿಕೆ ಪೊರ್ಣಗೊಳ್ಳುವವರೆಗೆ ಜಿಲ್ಲೆಯಲ್ಲಿ ವಿಶೇಷ ಬಂದೋಬಸ್ತಿಗೆ ಈ ತಂಡಗಳು ಸಹಕಾರ ನೀಡಲಿವೆ.ಕೆಲವು ದಿನಗಳಲ್ಲಿ ಕೇಂದ್ರ ಸಶಸ್ತ್ರ ಸೀಮಾ ಬಲದ ಜವಾನರು ಆಗಮಿಸಲಿದ್ದಾರೆ.ಜಿಲ್ಲೆಯಲ್ಲಿ ಭದ್ರತಾ ಚಟುವಟಿಕೆಗಳು ಚುರುಕು ಗೊಂಡಿದ್ದ ಇಂದು ಕರ್ನಾಟ ಕೇರಳ ರಾಜ್ಯಗಳ ಗಡಿ ಪ್ರದೇಶಗಳಿಗೆ ಸಂಭಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದೆ.
ಜಿಲ್ಲೆಯ ಆಯ ಕಟ್ಟಿನ ಪ್ರದೇಶಗಳು ಸೇರಿದಂತೆ 26 ಕಡೆಗಳಲ್ಲಿ ನಗ ದು ಹಾಗೂ ವಸ್ತುಗಳ ಅಕ್ರಮ ಸಾಗಾಟ ಹಾಗೂ ಭದ್ರತಾ ತಪಾಸಣೆಯ ದೃಷ್ಟಿಯಿಂದ ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ.ಈ ನಡುವೆ ರೈಲು,ಅಂತರಾಜ್ಯ ಸಾರಿಗೆ,ಗಡಿ ಪ್ರದೇಶಗಳ ಮೂಲಕ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿವಿಧ ವಿಭಾಗಗಳ ಭದ್ರತಾ ವಿಭಾಗಳ ಸಭೆ ನಗರದಲ್ಲಿ ನಡೆದಿದೆ.
ಮಂಗಳೂರು, ಮಂಗಳೂರು ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರ, ಮೂಡಬಿದ್ರೆ ಬೆಳ್ತಂಗಡಿ ಪುತ್ತೂರು ಬಂಟ್ವಾಳ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಮೂರು ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ ಹಾಗೂ ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಸುಳ್ಯದ ಜಾಲ್ಸೂರು,ಮಂಡೆಕೋಲು, ನಾರ್ಕೋಡು, ಕಲ್ಲು ಗುಂಡಿ ಮತ್ತು ಗುಂಡ್ಯ ಸೇರಿದಂತೆ 5 ಕಡೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಚುನಾವಣೆಗೆ ಸೂಕ್ತ ತಯಾರಿ ನಡೆದಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.







