ತುಮಕೂರು: ಬಿಜೆಪಿ ಮುಖಂಡ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ

ತುಮಕೂರು,ಎ.11: ಅದಾಯ ತೆರಿಗೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಉದ್ಯಮಿ ಹಾಗೂ ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉದ್ಯಮಿ ಹಾಗೂ ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಅವರ ವಿನಾಯಕನಗರದ ಮನೆ ಹಾಗೂ ಗಾಂಧಿನಗರದಲ್ಲಿರುವ ಮನೆ ಹಾಗೂ ನಗರದ ಟೌನ್‍ಹಾಲ್ ಸಮೀಪವಿರುವ ಸಂಪಿಗೆ ಕಂಪರ್ಟ ಲಾಡ್ಜ್ ಮೇಲೆ ಎಕ ಕಾಲಕ್ಕೆ ಸುಮಾರು 15 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ರಾತ್ರಿ 8 ಗಂಟೆಯಾದರೂ ತನಿಖೆಯನ್ನು ಮುಂದುವರೆಸಿದೆ.
ಬಿಜೆಪಿಯೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ವೆಂಕಟೇಶ್ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರ ಅಪ್ತ ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದ್ದು, ಮೂರು ಕಡೆ ಬಾಗಿಲು ಭದ್ರಪಡಿಸಿ, ಮನೆಯವರು ಹೊರಹೋಗದಂತೆ ಎಚ್ಚರಿಕೆ ವಹಿಸಿ ತನಿಖೆಯನ್ನು ಮುಂದುವರೆಸಿರುವುದರಿಂದ ಯಾವುದೆಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.
Next Story





