ಮೈಸೂರು: ಕಾರುಗಳ ನಡುವೆ ಢಿಕ್ಕಿ; ಓರ್ವ ಮೃತ್ಯು

ಮೈಸೂರು,ಎ.11: ಒಬ್ಬರನ್ನೊಬ್ಬರು ಹಿಂದಿಕ್ಕುವ ಚಾಲೆಂಜ್ ನಿಂದಾಗಿ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಬೆಂಗಳೂರು-ಮೈಸೂರು ರಸ್ತೆಯ ರಿಂಗ್ ರೋಡ್ ಬಳಿ ನಡೆದಿದೆ.
ಮೃತನನ್ನು ಇಮ್ರಾನ್ (28) ಎಂದು ಗುರುತಿಸಲಾಗಿದ್ದು, ಒಂದೇ ಗುಂಪಿನ ಎರಡು ಕಾರುಗಳ ನಡುವೆ ವೇಗದ ಚಾಲೆಂಜ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಸೈಯದ್ ಅಲೀಂ ಹಾಗೂ ವಜೀದ್ ಪಾಷಾ ಎಂಬವರು ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಎನ್.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





