ಎ.14: ‘ಬಿಸು ಕಣಿ ಪರ್ಬೊ’ ಬಾನುಲಿ ನೇರ ಪ್ರಸಾರ
ಮಂಗಳೂರು, ಎ.11: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಚಾವಡಿ ಮದಿಪು’ ಕಾರ್ಯಕ್ರಮದಲ್ಲಿ ಎ.14ರಂದು ಬೆಳಗ್ಗೆ 10:30ಕ್ಕೆ ‘ಬಿಸು ಪರ್ಬೊಗು ಕಬಿತೆದ ಕಣಿ’ ಎಂಬ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.
ವಿಷು ಹಬ್ಬದ ಪ್ರಯುಕ್ತ ಆಸಕ್ತ ತುಳುವರು ನೇರಪ್ರಸಾರದಲ್ಲಿ ತುಳು ಕವಿತೆ ವಾಚಿಸುವುದರ ಜೊತೆಗೆ ತುಳುನಾಡಿನ ವಿಷು ಹಬ್ಬದ ಸಾಂಪ್ರದಾಯಿಕ ಮಹತ್ವದ ಬಗ್ಗೆ ಸಂವಾದ ನಡೆಸಬಹುದು. ಕೇಳುಗರ ಕವಿತೆ ಚುಟುಕಾಗಿದ್ದು ಮೂರು ನಿಮಿಷ ಅವಧಿ ಮೀರಬಾರದು. ವಿಷು ಹಬ್ಬಕ್ಕೆ ಸಂಬಂಧಿಸಿದ ಕವನವಾಗಿರಬೇಕು, ಹಾಡುವುದಕ್ಕೂ ಅವಕಾಶವಿದೆ. ನೇರಪ್ರಸಾರದಲ್ಲಿ ಕೇಳುಗರ ಜೊತೆ ತುಳು ವಿದ್ವಾಂಸ ಮುದ್ದು ಮೂಡುಬೆಳ್ಳೆ ಸಂವಾದ ನಡೆಸಿಕೊಡಲಿದ್ದಾರೆ.
ಕವಿತೆಯ ಮೂಲಕ ಕಣಿ ಇಡುವ ವಿಷು ಹಬ್ಬದ ಈ ನೂತನ ಕಾರ್ಯಕ್ರಮದಲ್ಲಿ ಆಸಕ್ತರು ಪಾಲ್ಗೊಳ್ಳಲು 0824-2211999, ಹಾಗೂ ಮೊ.ಸಂ: 8277038000 ಸಂಪರ್ಕಿಸಬಹುದು. ತುಳು ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಕಾರ್ಯಕ್ರಮ ನಿರ್ವಹಿಸಿಕೊಡಲಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಧರಾದ ಉಷಾಲತಾ ಸರಪಾಡಿ ತಿಳಿಸಿದ್ದಾರೆ.





