Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಗತ್ತಿನಲ್ಲಿ ಅತೀ ಹೆಚ್ಚು ಭೂಮಿ...

ಜಗತ್ತಿನಲ್ಲಿ ಅತೀ ಹೆಚ್ಚು ಭೂಮಿ ಹೊಂದಿರುವವರು ಯಾರು ಗೊತ್ತಾ?

ಇವರ ಬಳಿಯಿದೆ ನಿಮ್ಮ ಊಹೆಗೂ ನಿಲುಕದಷ್ಟು ಜಮೀನು

ವಾರ್ತಾಭಾರತಿವಾರ್ತಾಭಾರತಿ12 April 2018 7:12 PM IST
share
ಜಗತ್ತಿನಲ್ಲಿ ಅತೀ ಹೆಚ್ಚು ಭೂಮಿ ಹೊಂದಿರುವವರು ಯಾರು ಗೊತ್ತಾ?

ನಾವು ನೂರೋ ಇನ್ನೂರೋ ಎಕರೆ ಭೂಮಿ ಹೊಂದಿರುವವರನ್ನೇ ದೊಡ್ಡ ಜಮೀನ್ದಾರರು ಎಂದು ಕರೆಯುತ್ತೇವೆ. ಆದರೆ ಲಕ್ಷಾಂತರ ಎಕರೆ ಭೂಮಿ ಇರುವವರನ್ನು? ವಾಸ್ತವದಲ್ಲಿ ಹೆಚ್ಚಿನವರಿಗೆ ಇಂತಹುದೊಂದು ಕಲ್ಪನೆಯೂ ಇರುವುದಿಲ್ಲ. ಆದರೆ ಜಗತ್ತಿನಲ್ಲಿ ಇಂತಹ ಜಮೀನ್ದಾರರೂ ಇದ್ದಾರೆ. ಇಲ್ಲಿದೆ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ವಿಸ್ತೀರ್ಣದ ಭೂಮಿಯ ಮಾಲಕರಾಗಿರುವ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಟ್ಟಿ(ಭೂಮಿಯ ವಿಸ್ತೀರ್ಣವನ್ನು ಹೆಕ್ಟೇರ್‌ಗಳಲ್ಲಿ ನೀಡಲಾಗಿದೆ. ಒಂದು ಹೆಕ್ಟೇರ್ ಎಂದರೆ 2.47 ಎಕರೆ)........

ನಂ.10:ಬ್ರೆಟ್ ಬ್ಲಂಡಿ

ಆಸ್ಟ್ರೇಲಿಯಾದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಪ್ರತಿಷ್ಠಿತ ಉದ್ಯಮಿ ಯಾಗಿರುವ ಬ್ರೆಟ್ ಬ್ಲಂಡಿ 3.4 ಮಿಲಿಯನ್ ಹೆಕ್ಟೇರ್ ಭೂಮಿಯ ಮಾಲಕನಾಗಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದಲ್ಲಿಯ ವಾಲ್‌ಹ್ಯಾಲೋ ಜಾನುವಾರು ಕೇಂದ್ರವನ್ನು 77 ಮಿ.ಅಮೆರಿಕನ್ ಡಾಲರ್ ನೀಡಿ ಖರೀದಿಸಿದ್ದಾರೆ.

ನಂ.9: ಬ್ರೂಕ್ ಕುಟುಂಬ

3.5 ಮಿ.ಹೆ.ಭೂಮಿ, ಅಂದರೆ ತೈವಾನ್‌ನಷ್ಟು ವಿಸ್ತೀರ್ಣದ ಪ್ರದೇಶದ ಒಡೆತನ ಹೊಂದಿರುವ ಡೇವಿಡ್ ಬ್ರೂಕ್ ಮತ್ತು ಅವರ ಕುಟುಂಬ ದಕ್ಷಿಣ ಕ್ವೀನ್ಸ್‌ಲ್ಯಾಂಡ್ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಹೊಲ, ತೋಟಗಳನ್ನು ಹೊಂದಿದೆ.

ನಂ.8:ಮ್ಯಾಕ್ವೇರಿ ಗ್ರೂಪ್

ಈ ಗ್ರುಪ್‌ನ ಪಾರಾವೇ ಪ್ಯಾಸ್ಟ್ರಾಲ್ ಕಂಪನಿಯು ಆಸ್ಟ್ರೇಲಿಯಾದಲ್ಲಿ ಸುಮಾರು 4.4 ಮಿ.ಹೆ.ಭೂಮಿಯ ಒಡೆತನವನ್ನು ಹೊಂದಿದ್ದು, ಕುರಿಗಳು ಮತ್ತು ಇತರ ಜಾನುವಾರುಗಳ ಸಾಕಾಣಿಕೆ ಮತ್ತು ಮಾರಾಟ ಉದ್ಯಮವನ್ನು ನಡೆಸುತ್ತಿದೆ.

ನಂ.7:ಗಯ್ ಹ್ಯಾಂಡ್ಸ್

ಬ್ರಿಟಿಷ್ ಹೂಡಿಕೆ ಸಂಸ್ಥೆ ಗಯ್ ಹ್ಯಾಂಡ್ಸ್‌ನ ಒಡೆತನದಲ್ಲಿರುವ ಟೆರ್ರಾ ಫರ್ಮಾ ಕ್ಯಾಪಿಟಲ್‌ನ ಪಾಲುದಾರರು ನಡೆಸುತ್ತಿರುವ ಕನ್ಸಾಲಿಡೇಟೆಡ್ ಪ್ಯಾಸ್ಟ್ರಾಲ್ ಕಂಪನಿಯು ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಖಾಸಗಿ ಒಡೆತನದ ಬೀಫ್ ಉತ್ಪಾದಕ ಸಂಸ್ಥೆಯಾಗಿದ್ದು, ಯಾವುದೇ ಸಮಯದಲ್ಲಿಯೂ ಕನಿಷ್ಠ 375,000 ಜಾನುವಾರುಗಳು ಇಲ್ಲಿರುತ್ತವೆ. ಈ ಕಂಪನಿಯು 5.7 ಮಿ.ಹೆ.ಭೂಮಿಯ ಒಡೆತನ ಹೊಂದಿದೆ.

ನಂ.6:ಮ್ಯಾಕ್‌ಲಚ್ಲಾನ್ ಕುಟುಂಬ

ಎಚ್.ಪಿ.ಮ್ಯಾಕ್‌ಲಚ್ಲಾನ್ ಅವರು 1888ರಲ್ಲಿ ಅಡಿಲೇಡ್‌ನಲ್ಲಿ ಸ್ಥಾಪಿಸಿದ್ದ ಜಂಬಕ್ ಪ್ಯಾಸ್ಟ್ರಾಲ್ ಕಂಪನಿಯು ಆಸ್ಟ್ರೇಲಿಯದಾದ್ಯಂತ 5.75 ಮಿ.ಹೆ.ಭೂಮಿಯ ಮೇಲೆ ನಿಯಂತ್ರಣ ಹೊಂದಿದೆ. ಇದು ದೇಶದ ಪ್ರಮುಖ ಉಣ್ಣೆ ಪೂರೈಕೆ ಕಂಪನಿಯಾಗಿದೆ.

ನಂ.5: ಜೋ ಲೂವಿಸ್ ಮತ್ತು ಕಂಪನಿ

ಬ್ರಿಟಿಷ್ ಉದ್ಯಮಪತಿ ಜೋ ಲೂವಿಸ್ ಅವರು 1824ರಷ್ಟು ಹಿಂದೆ ಸ್ಥಾಪನೆಗೊಂಡ ಆಸ್ಟ್ರೇಲಿಯನ್ ಅಗ್ರಿಕಲ್ಚರಲ್ ಕಂಪನಿಯ ಪ್ರಮುಖ ಶೇರ್ ಹೋಲ್ಡರ್ ಆಗಿದ್ದಾರೆ. ಅವರು ಮತ್ತು ಕಂಪನಿಯ ಇತರ ಶೇರುದಾರರು 7 ಮಿ.ಹೆ.ಭೂಮಿಯ ಮೇಲೆ ನಿಯಂತ್ರಣ ಹೊಂದಿದ್ದಾರೆ.

ನಂ.4: ಝಾಂಗ್ಡಿಂಗ್ ಡೇರಿ ಫಾರ್ಮಿಂಗ್ ಮತ್ತು ಸೆವನ್ರಿ ಬರ್

ಚೀನಾದ ಮಡಂಜಿಯಾಂಗ್‌ನಲ್ಲಿರುವ ಬೃಹತ್ ಫಾರ್ಮ್‌ನ ಜಂಟಿ ಮಾಲಕತ್ವವನ್ನು ಝಾಂಗ್ಡಿಂಗ್ ಡೇರಿ ಫಾರ್ಮಿಂಗ್ ಮತ್ತು ರಷ್ಯಾದ ಸೆವನ್ರಿ ಬರ್ ಹೊಂದಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಫಾರ್ಮ್ ಆಗಿದೆ. 9.1 ಮಿ.ಹೆ.ವಿಸ್ತೀರ್ಣ ಹೊಂದಿರುವ ಈ ಫಾರ್ಮನಲ್ಲಿ ಒಂದು ಲಕ್ಷ ಹಸುಗಳಿವೆ.

ನಂ.3: ಜಿನಾ ರೈನ್‌ಹಾರ್ಟ್

ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಜಿನಾ ರೈನ್‌ಹಾರ್ಟ್ 12 ಮಿ.ಹೆ.ಭೂಮಿಯ ಒಡತಿಯಾಗಿರುವುದ ರೊಂದಿಗೆ ಆಸ್ಟ್ರೇಲಿಯಾದ ನಂ.1 ಜಮೀನ್ದಾರರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 21 ವಿಶಾಲ ಜಾನುವಾರು ಕೇಂದ್ರಗಳ ಮಾಲಕಿಯಾಗಿರುವ ಅವರು ಇದು ಸಾಲದೆ ಎಸ್.ಕಿಡ್ಮನ್ ಆ್ಯಂಡ್ ಕಂಪನಿ ಯಿಂದ ಇನ್ನಷ್ಟು ಭೂಮಿಯನ್ನು ಖರೀದಿಸಿದ್ದಾರೆ.

ನಂ.2: ನುನಾವತ್‌ನ ಇನ್ಯೂಟ್ ಜನಾಂಗ

ಕೆನಡಾದ ಮಧ್ಯ ಮತ್ತು ಪೂರ್ವ-ವಾಯುವ್ಯ ಪ್ರದೇಶಗಳಿಗೆ ಸೇರಿರುವ ಇನ್ಯೂಟ್ ಜನಾಂಗ 35 ಮಿ.ಹೆ.ಭೂಮಿಯ ಒಡೆತನವನ್ನು ಹೊಂದಿದೆ. ಸರಕಾರವು 1993ರಲ್ಲಿ ಈ ಭೂಮಿಯನ್ನು ಅವರಿಗೆ ನೀಡಿತ್ತು. ನುನಾವತ್ ಪ್ರಾಂತ್ಯವು 1999ರಲ್ಲಿ ರೂಪುಗೊಂಡಿದೆ.

ನಂ.1: ಕೆಥೋಲಿಕ್ ಚರ್ಚ್

ಜಗತ್ತಿನ ನಂ.1 ಜಮೀನ್ದಾರನಾಗಿರುವ ಕೆಥೋಲಿಕ್ ಚರ್ಚ್ 71.6 ಮಿ.ಹೆ.ಅಂದರೆ ಫ್ರಾನ್ಸ್ ದೇಶಕ್ಕಿಂತ ದೊಡ್ಡದಾಗಿರುವ ಭೂಪ್ರದೇಶದ ಒಡೆತನವನ್ನು ಹೊಂದಿದೆ. ತನ್ಮೂಲಕ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಅವರು ವಿಶ್ವದಲ್ಲಿಯ ಅತ್ಯಂತ ದೊಡ್ಡ ಖಾಸಗಿ ಭೂ ಮಾಲಿಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಕೆಥೋಲಿಕ್ ಚರ್ಚ್ ಭೂಮಿಯನ್ನು ಹೊಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X