ಮಲ್ಪೆಯಲ್ಲಿ ಅರೆಸೇನಾ ಪಡೆಯಿಂದ ಪಥಸಂಚಲನ

ಮಲ್ಪೆ, ಎ.12: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಅರೆ ಸೇನಾ ಪಡೆಯ ಸಿಬ್ಬಂದಿಗಳು ಹಾಗೂ ಉಡುಪಿ ಪೊಲೀಸರು ಇಂದು ಮಲ್ಪೆಯಲ್ಲಿ ಪಥ ಸಂಚಲನ ನಡೆಸಿದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ 100 ಮಂದಿ ಅರೆ ಸೇನಾ ಪಡೆಯ ಸಿಬ್ಬಂದಿಗಳು ಮಲ್ಪೆ ಏಳೂರು ಮೊಗವೀರ ಸಭಾಭವನದಿಂದ ಮಲ್ಪೆ ಜಂಕ್ಷನ್, ಸಿಟಿಜನ್ ಸರ್ಕಲ್, ಕೊಳ ಬೀಚ್, ಹನುಮಾನ್‌ನಗರವಾಗಿ ಮಲ್ಪೆ ಬೀಚ್‌ವರೆಗೆ ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಜೈಶಂಕರ್, ಸಿಪಿ ಎಂಎಫ್‌ನ ಸಹಾಯಕ ಕಮಾಂಡೆಂಟ್ ದೇವೇಂದ್ರ ಉಪಾಧ್ಯಾಯ, ಡಿಎಆರ್‌ನ ನಿರೀಕ್ಷಕ ರಾಘವೇಂದ್ರ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಠಾಣಾಧಿಕಾರಿ ಮಧು ಉಪಸ್ಥಿತರಿದ್ದರು.
Next Story





