ಐಪಿಎಲ್: ಮುಂಬೈ ಇಂಡಿಯನ್ಸ್ 147/8

ಹೈದರಾಬಾದ್, ಎ.12: ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿದೆ.
ಗುರುವಾರ ನಡೆದ ಐಪಿಎಲ್‌ನ 7ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ನಾಯಕ ರೋಹಿತ್ ಶರ್ಮ(11) ಉತ್ತಮ ಆರಂಭ ನೀಡಲು ವಿಫಲರಾದರು. ಲೂವಿಸ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ರೋಹಿತ್ 2ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಟಾನಿಲೇಕ್ ಅವರು ರೋಹಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.
ಲೂವಿಸ್(29) ಹಾಗೂ ಇಶನ್ ಕಿಶನ್(9)2ನೇ ವಿಕೆಟ್‌ಗೆ 37 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಹಾರ್ದಿಕ್ ಪಾಂಡ್ಯ(15) ಹಾಗೂ ಕಿರೊನ್ ಪೊಲಾರ್ಡ್(28) 5 ನೇ ವಿಕೆಟ್‌ಗೆ 38 ರನ್ ಜೊತೆಯಾಟ ನಡೆಸಿದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ 28 ರನ್ ಗಳಿಸಿ ಔಟಾದರು.
ಹೈದರಾಬಾದ್ ಪರ ಸಂದೀಪ್ ಶರ್ಮ(2-25), ಸ್ಟ್ಯಾನಿಲೇಕ್(2-42) ಹಾಗೂ ಸಿದ್ದಾರ್ಥ್ ಕೌಲ್(2-29)ತಲಾ ಎರಡು ವಿಕೆಟ್ ಪಡೆದರು. ಶಾಕಿಬ್ ಅಲ್ ಹಸನ್ 34 ರನ್‌ಗೆ 1 ವಿಕೆಟ್ ಪಡೆದರು.







