ನಂದಿನಿಯ ‘ಚಿನ್ನದ ನಾಣ್ಯ ಗೆಲ್ಲಿರಿ’ ಯೋಜನೆಯ ದ್ವಿತೀಯ ಡ್ರಾ ಕಾರ್ಯಕ್ರಮ
ಮಂಗಳೂರು, ಎ.12: ದ.ಕ.ಜಿಲ್ಲಾ ಹಾಲು ಒಕ್ಕೂಟವು ಫೆ.10ರಿಂದ ಮೇ 9ರವರೆಗೆ ನಂದಿನಿ ಸಿಹಿ ಉತ್ಪನ್ನಗಳಾದ ಪೇಡಾ, ಮೈಸೂರು ಪಾಕ್, ಕ್ಯಾಶ್ಯು ಬರ್ಫಿ, ಬೈಟ್ ಖರೀದಿಸುವ ಗ್ರಾಹಕರಿಗೆ ಹಮ್ಮಿಕೊಂಡಿರುವ ‘ಚಿನ್ನದ ನಾಣ್ಯ ಗೆಲ್ಲ್ಲಿರಿ’ ಯೋಜನೆಯ ದ್ವಿತೀಯ ತಿಂಗಳ ಡ್ರಾವನ್ನು ಗುರುವಾರ ಒಕ್ಕೂಟದ ಸ್ಥಾವರ ವಿಭಾಗದಲ್ಲಿ ಸಂಸ್ಥೆಯ ಕಾರ್ಮಿಕರ ಸಮ್ಮುಖದಲ್ಲಿ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಕಾರ್ಮಿಕ/ಸಿಬ್ಬಂದಿ ವರ್ಗವು ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸ್ವಚ್ಚತೆಯಿಂದ ಉತ್ಪಾದಿಸಿದ ಕಾರಣ ನಂದಿನಿ ಸಿಹಿ ಉತ್ಪನ್ನಗಳು ಜನರ ಮನಸ್ಸಿನಲ್ಲಿ ನೆಲೆವೂರಿದೆ. ಇನ್ನೂ ಹೆಚ್ಚಿನ ಶ್ರಮ ವಹಿಸಿ ಮಾರುಕಟ್ಟೆಯಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಎಲ್ಲಾ ಗ್ರಾಹಕರು ಖರೀದಿಸುವಂತಾಗಲು ಶ್ರಮಿಸಬೇಕು ಎಂದು ಕರೆ ನೀಡಿದರು.
*ಫಲಿತಾಂಶದ ವಿವರ: (ಮಾ.10ರಿಂದ ಎ.10ರವರೆಗೆ ಮಾರಾಟ ಮಾಡಿದ ಉತ್ಪನ್ನಗಳ ಪ್ಯಾಕ್‌ಗಳು ಒಳಗೊಂಡಂತೆ) ಪ್ರಥಮ ಬಹುಮಾನ 5 ಗ್ರಾಂ ಚಿನ್ನದ ನಾಣ್ಯ ಕೂಪನ್ ಸಂಖ್ಯೆ: 275208, ದ್ವಿತೀಯ ಬಹುಮಾನ 3 ಗ್ರಾಂ ಚಿನ್ನದ ನಾಣ್ಯ ಕೂಪನ್ ಸಂಖ್ಯೆ:281834, ತೃತೀಯ ಬಹುಮಾನ 2 ಗ್ರಾಂ ಚಿನ್ನದ ನಾಣ್ಯ, ಕೂಪನ್ ಸಂಖ್ಯೆ: 315295.
500 ರೂ. ಮೌಲ್ಯದ ನಂದಿನಿ ಸಿಹಿ ಉತ್ಪನ್ನಗಳ 25 ಸಮಾಧಾನಕರ ಬಹುಮಾನಗಳು : 314211, 280160, 310342, 284120, 313247, 267104, 310744, 278270, 229688, 314562, 229420, 229733, 310870, 247372, 233619, 273663, 287031, 308797, 312056, 299663, 314271, 271688, 306052, 239615, 315487.







