ಯಲ್ಲಾಪುರ: ಸಿಡಿಲು ಬಡಿದು ಯುವಕ ಮೃತ್ಯು
ಯಲ್ಲಾಪುರ, ಎ. 12: ಸಿಡಿಲು ಬಡಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿಯ ಜೋಗಿನಕೊಪ್ಪ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಯಲ್ಲಾಪುರದ ಮಾದೇಕೊಪ್ಪ ನಿವಾಸಿ ಜಾನು ವಿಠ್ಠು ಥೋರತ (32) ಮೃತರು ಎಂದು ಗುರುತಿಸಲಾಗಿದೆ.
ಅವರು ಗುರುವಾರ ಸಂಜೆ ಜೋಗಿನಕೊಪ್ಪದಲ್ಲಿದ್ದ ತನ್ನ ತಂಗಿಯ ಮನೆಯ ದುರಸ್ತಿಗಾಗಿ ತೆರಳಿದ್ದು, ಮನೆ ದುರಸ್ತಿಯ ವೇಳೆಯಲ್ಲಿ ಸಿಡಿಲು ಬಡಿದು ಜಾನು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





