ಮತದಾನ ಜಾಗೃತಿಗಾಗಿ ಶಿರೂರು ಶ್ರೀ ವಿಶೇಷ ಪೂಜೆ

ಕುಂದಾಪುರ, ಎ.12: ಮತದಾನ ಜಾಗೃತಿಗಾಗಿ ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಇಂದು ಕುಂದಾಪುರದ ಕುಂದೇಶ್ವರ, ಕೊಲ್ಲೂರು ಹಾಗೂ ಆನೆಗುಡ್ಡೆ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕುಂದೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಎಲ್ಲರಿಗೂ ಮತದಾನ ಜಾಗೃತಿಯಾಗಲಿ ಎಂದು ನಾನು ಇಲ್ಲಿಗೆ ಬಂದಿದ್ದೇನೆ ಹೊರತು ಚುನಾವಣೆ ವಿಚಾರಕ್ಕಾಗಿ ಅಲ್ಲ. ರಾಜಕೀಯ ಕುರಿತಂತೆ ನಾನು ಈಗ ಏನು ಕೂಡ ಹೇಳುವುದಿಲ್ಲ. ದೇವರ ಇಚ್ಚೆಯಂತೆ ನಾನು ನಡೆಯುತ್ತೇನೆ ಎಂದರು.
ಪೇಜಾವರ ಸ್ವಾಮೀಜಿಯ ಹೇಳಿಕೆ ಕುರಿತಂತೆ ಸಮಯ ಬಂದಾಗ ಪ್ರತಿಕ್ರಿಯಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತ ಜನರಿಗೆ ಹೇಳುತ್ತಿದ್ದೇನೆ ಎಂದು ಶಿರೂರು ಸ್ವಾಮೀಜಿ ಹೇಳಿದರು.
Next Story





