ತಾಲಿಬಾನ್ ದಾಳಿ: ಜಿಲ್ಲಾ ಗವರ್ನರ್ ಸೇರಿ 13 ಸಾವು

ಘಝ್ನಿ (ಅಫ್ಘಾನಿಸ್ತಾನ), ಎ. 12: ತಾಲಿಬಾನ್ ಬಂಡುಕೋರರು ಗುರುವಾರ ಮುಂಜಾನೆ ಜಿಲ್ಲಾ ಕೇಂದ್ರ ಕಚೇರಿಯೊಂದರ ಆವರಣದ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಗವರ್ನರ್ ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಝ್ನಿ ಪ್ರಾಂತದ ಖ್ವಾಜಾ ಉಮರಿ ಜಿಲ್ಲೆಯ ಕೇಂದ್ರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಆರು ಪೊಲೀಸರೂ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಂಬತ್ತು ಗುಪ್ತಚರ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಗವರ್ನರ್‌ರ ವಕ್ತಾರರೊಬ್ಬರು ತಿಳಿಸಿದರು.
ಭಯೋತ್ಪಾದಕರು ಏಣಿಯೊಂದನ್ನು ಬಳಸಿ ಕೇಂದ್ರ ಕಚೇರಿ ಆವರಣದ ಒಳಗೆ ನುಸುಳಿದರು.
Next Story





