ಪ್ರಧಾನಿ ಮೋದಿಯಿಂದ ಒಂದು ದಿನ ಉಪವಾಸ

ಹುಬ್ಬಳ್ಳಿ, ಎ. 12: ಸಂಸತ್ತಿನಲ್ಲಿ ಪ್ರತಿಪಕ್ಷಗಳ ನಡತೆ ಪ್ರತಿಭಟಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುರುವಾರ ಒಂದು ದಿನ ಉಪವಾಸ ನಡೆಸಿದರು. ಹಲವು ಬಿಜೆಪಿ ಸಂಸದರು ದೇಶಾದ್ಯಂತದ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಆಚರಿಸಿದರು.
ಪ್ರಧಾನಿ ಅವರು ತನ್ನ ದಿನನಿತ್ಯದ ಕೆಲಸ ಕಾರ್ಯಗಳ ನಡುವೆಯೂ ಚೆನ್ನೈ ಸಮೀಪದ ಕಾಂಚೀಪುರಂನಲ್ಲಿ ರಕ್ಷಣಾ ಸಂಗ್ರಹಾಗಾರವನ್ನು ಉದ್ಘಾಟಿಸಿದರು. ಅಮಿತ್ ಶಾ ಅವರು ವಿಧಾನ ಸಭೆ ಚುನಾವಣೆ ನಡೆಯಲಿರುವ ಕರ್ನಾಟಕದ ಹುಬ್ಬಳಿಯಲ್ಲಿ ಉಪವಾಸ ನಡೆಸಿದರು. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ವಾರಣಾಸಿಯಲ್ಲಿ ಉಪವಾಸ ಆಚರಿಸಿದರು.
ದೇಶಾದ್ಯಂತ ಹರಡುತ್ತಿರುವ ಕೋಮು ಹಿಂಸಾಚಾರ ಹಾಗೂ ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಕಾಂಗ್ರೆಸ್ ಉಪವಾಸ ನಡೆಸಿದ ಕೆಲವು ದಿನಗಳ ಬಳಿಕ ಬಿಜೆಪಿ ಈ ಉಪವಾಸ ನಡೆಸುತ್ತಿದೆ.
Next Story





