ನಾಗಮಂಗಲ: ಸಾರಿಗೆ ಬಸ್ ಹರಿದು ಬೈಕ್ ಸವಾರ ಮೃತ್ಯು

ನಾಗಮಂಗಲ, ಎ.12: ಸಾರಿಗೆ ಹರಿದು ಬೈಕ್ ಸವಾರ ಮೃತಪಟ್ಟ ದುರ್ಘಟನೆ ಪಟ್ಟಣದ ಉಪ್ಪಾರಹಳ್ಳಿ ಗೇಟ್ ಬಳಿ ಗುರುವಾರ ನಡೆದಿದೆ.
ನಾಗಮಂಗಲ ಪಟ್ಟಣ ವಾಸಿಯಾದ ಎಲೆಕ್ಟ್ರಿಕ್ ಗುತ್ತಿಗೆದಾರ ಶ್ರೀನಿವಾಸ್(40) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ತುಮಕೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್ ಉಪ್ಪಾರಹಳ್ಳಿ ಗೇಟ್ ಬಳಿಯ ತಿರುವಿನಲ್ಲಿ ಬೈಕ್ ಸವಾರನಿಗೆ ಢಿಕ್ಕಿ ಹೊಡೆದು ರಸ್ತೆ ವಿಭಜಕದ ಮೇಲೆ ಹತ್ತಿ ಮತ್ತೆ ಸವಾರನ ಮೇಲೆ ಹರಿದಿದೆ. ರಕ್ತದ ಮಡುವಿನಲ್ಲಿದ್ದ ಶ್ರೀನಿವಾಸ್ ಅವರನ್ನು ತಕ್ಷಣ ಸ್ಥಳಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಈ ಸಂಬಂಧ ಪಟ್ಟಣ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
Next Story





