ಮಂಡ್ಯ: ಟಿಪ್ಪರ್ ಢಿಕ್ಕಿ; ಕೂಲಿ ಕಾರ್ಮಿಕ ಮೃತ್ಯು

ಮಂಡ್ಯ, ಎ.13: ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ನೀಲನಹಳ್ಳಿ ಗೇಟ್ ಬಳಿ ಮೈಸೂರು ಬೀದರ್ ಹೆದ್ದಾರಿ ದುರಸ್ತಿ ಕಾಮಗಾರಿ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಟಿಪ್ಪರ್ ವಾಹನ ಢಿಕ್ಕಿಯೊಡೆದು ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ವಿನಯ್(40) ಸ್ಥಳದಲ್ಲೇ ಮೃತಪಟ್ಟಿದ್ದರೆ, ತೀವ್ರವಾಗಿ ಗಾಯಗೊಂಡಿರುವ ಭವಿಷ್ ಎಂಬುವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ.
ಗುರುವಾರ ತಡರಾತ್ರಿ ಕಾಮಗಾರಿಗೆ ಮಣ್ಣು ಜೆಲ್ಲಿ ಸಾಗಿಸುತ್ತಿದ ವೇಳೆ ಚಾಲಕನ ನಿರ್ಲಕ್ಷ್ಯದಿಂದ ಕೂಲಿ ಕಾರ್ಮಿಕರಿಗೆ ಟಿಪ್ಪರ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.
ಈ ಸಂಬಂಧ ಮೇಲುಕೋಟೆ ಪಿಎಸ್‍ಐ ಸೋಮೇಗೌಡ ಚಾಲಕ ಆನಂದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Next Story





