ಐಪಿಎಲ್: ಕಿಂಗ್ಸ್ ಇಲೆವೆನ್ ಗೆ ರೋಚಕ ಜಯ

ಮೊಹಾಲಿ, ಎ.15: ಐಪಿಎಲ್ ಟ್ವೆಂಟಿ-20 ಟೂರ್ನಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 4 ರನ್‌ಗಳ ರೋಚಕ ಜಯ ಗಳಿಸಿದೆ.
ಗೆಲುವಿಗೆ 198 ರನ್‌ಗಳ ಸವಾಲು ಪಡೆದ ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು.
ಚೆನ್ನೈ ತಂಡದ ಪರ ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾಗದೆ 79 ರನ್ ಮತ್ತು ಅಂಬಟಿ ರಾಯುಡು 49ರನ್ ಸೇರಿಸಿದರೂ ತಂಡ ಗೆಲುವಿನ ದಡ ಸೇರುವಲ್ಲಿ ಎಡವಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 197 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕ್ರಿಸ್ ಗೇಲ್ 63 ರನ್, ಲೋಕೇಶ್ ರಾಹುಲ್ 37 ರನ್,್ ಮಾಯಾಂಕ್ ಅಗರ್‌ವಾಲ್ 30ರನ್, ಯುವರಾಜ್ ಸಿಂಗ್ 20 ರನ್, ಕರುಣ್ ನಾಯರ್ 29 ರನ್, ರವಿಚಂದ್ರನ್ ಅಶ್ವಿನ್ 14 ರನ್ ಮತ್ತು ಆ್ಯಂಡ್ರೋ ತೀ ಔಟಾಗದೆ 3 ರನ್ ಗಳಿಸಿದರು.
ಚೆನ್ನೈ ತಂಡದ ಇಮ್ರಾನ್ ತಾಹಿರ್ ,ಶಾರ್ದುಲ್ ಠಾಕೂರ್ ತಲಾ 2 ವಿಕೆಟ್, ಹರ್ಭಜನ್ ಸಿಂಗ್, ಶೇನ್ ವ್ಯಾಟ್ಸನ್ ಮತ್ತು ಡ್ವೇಯ್ನಾ ಬ್ರಾವೊ ತಲಾ 1 ವಿಕೆಟ್ ಪಡೆದರು.
,,,,,,,,,,,







