Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ16 April 2018 12:21 AM IST
share
ಓ ಮೆಣಸೇ..

 ಹೊಸ ಸರಕಾರದಲ್ಲಿ ನಾವೇ ಕಿಂಗ್ ಮೇಕರ್, ಕುಮಾರಸ್ವಾಮಿಯೇ ಮುಖ್ಯಮಂತ್ರಿ - ಅಮರನಾಥ ಶೆಟ್ಟಿ, ಜೆಡಿಎಸ್ ನಾಯಕ

 ಹೇಗೂ ಕನಸು ಕಾಣುತ್ತಿದ್ದೀರಿ, ಕುಮಾರಸ್ವಾಮಿಯೇ ಪ್ರಧಾನಮಂತ್ರಿ ಎಂದು ಹೇಳಬಾರದೇ?

---------------------
ಚೀನಾವನ್ನು ನಾವು ಸೇನಾಬಲದಿಂದ ಸೋಲಿಸಲು ಸಾಧ್ಯವಿಲ್ಲ - ಇಂದ್ರೇಶ್ ಕುಮಾರ್, ಆರೆಸ್ಸೆಸ್ ನಾಯಕ

ಆರೆಸ್ಸೆಸ್ ಕಾರ್ಯಕರ್ತರನ್ನು ಗಡಿಗೆ ಕಳುಹಿಸುವುದೊಂದೇ ದಾರಿ.

---------------------
ಟೀಕೆಗಳಿಂದ ವೋಟು ಬರುವುದಿಲ್ಲ - ಮಧುಬಂಗಾರಪ್ಪ, ಜೆಡಿಎಸ್ ಯುವ ನಾಯಕ

ಟಿಕೆಟ್ ಬರುತ್ತದೆಯೋ ಎಂಬ ಪ್ರಯತ್ನ.

---------------------

ಬಿಜೆಪಿ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮದು ಮುಖವೇ ಇಲ್ಲದ ನಾಣ್ಯವೇ?

---------------------
ಕಾಂಗ್ರೆಸ್ ನನಗೆ ಎಲ್ಲವನ್ನು ನೀಡಿದೆ, ಆದ್ದರಿಂದ ಕಾಂಗ್ರೆಸ್ ತೊರೆಯುವುದಿಲ್ಲ - ಅಂಬರೀಷ್ ನಟ, ಶಾಸಕ

ಇನ್ನಷ್ಟು ನೀಡುವುದಕ್ಕೆ ಕಾಂಗ್ರೆಸ್‌ನಲ್ಲಿ ಏನೂ ಇಲ್ಲ, ಎಲ್ಲ ನಿಮ್ಮ ಆಸ್ಪತ್ರೆ ಬಿಲ್‌ಗಳನ್ನು ತುಂಬಿ ಖಾಲಿಯಾಗಿದೆ.

---------------------
ಈ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿ, ಮುಂದೆ ಮುಖ್ಯಮಂತ್ರಿಯಾಗಿ, ಆನಂತರ ಪ್ರಧಾನಿ ಕೂಡಾ ಆಗಲಿದ್ದೇನೆ - ಹುಚ್ಚ ವೆಂಕಟ್, ನಟ

ನರೇಂದ್ರ ಮೋದಿ ಬೆವರೊರೆಸಿಕೊಂಡರಂತೆ.

---------------------
ಜೆಡಿಎಸ್‌ಗೆ ಕೊಡುವ ಪ್ರತಿಯೊಂದು ಮತ ಬಿಜೆಪಿಗೆ ನೀಡಿದಂತೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ನೇರವಾಗಿ ಬಿಜೆಪಿಗೆ ಹಾಕಬೇಕು ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೀರಾ?

---------------------
ಬಿಜೆಪಿ ಬಿಡುವ ಯೋಚನೆ ಮಾಡಿಲ್ಲ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

ನಿಮ್ಮನ್ನು ಬಿಡುವ ಕುರಿತಂತೆ ಬಿಜೆಪಿಗೆ ಯೋಚನೆ ಇದ್ದಂತಿದೆ.

---------------------
ದೇವೇಗೌಡರು ನನಗೆ ದೇವರಿದ್ದ ಹಾಗೆ - ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವನಾಯಕ

ಅಂದರೆ ಊದು ಬತ್ತಿ ಹಚ್ಚುವುದೊಂದೇ ಬಾಕಿ ಎಂದಾಯಿತು.

---------------------
ಎಸ್.ಎಂ.ಕೃಷ್ಣ, ಬಿಜೆಪಿಯಲ್ಲಿರುವುದು ಸೂಕ್ತವಲ್ಲ, ಅವರಿಗೆ ಜೆಡಿಎಸ್ ಸೂಕ್ತ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ವೃದ್ಧಾಶ್ರಮದಲ್ಲಿ ತಂದೆಗೆ ಒಂದು ಜೊತೆಯಾದೀತು ಎಂಬ ದೂರಾಲೋಚನೆ.

---------------------
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಾತಾವರಣ ಮೇ ತಿಂಗಳಿನಲ್ಲಿ ಅಂತ್ಯವಾಗಲಿದೆ - ಶೋಭಾ ಕರಂದ್ಲಾಜೆ, ಸಂಸದೆ

ಅಂದರೆ ರೈತರ ಸಂಖ್ಯೆ ಅಷ್ಟರಮಟ್ಟಿಗೆ ಇಳಿಕೆಯಾಗಿದೆಯೇ?

---------------------
ರಾಜಕೀಯವೆಂಬ ಕೆಸರಿನಿಂದ ನಾನು ಯಾವತ್ತೂ ದೂರವಿರುತ್ತೇನೆ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಸೆಗಣಿಯೇ ನಿಮಗೆ ಇಷ್ಟ ಎನ್ನುವುದು ರಾಜ್ಯಕ್ಕೆ ಗೊತ್ತಿದೆ.

---------------------
ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಕಾವಲು ನಾಯಿಯ ಕೆಲಸ ಮಾಡಿದೆ -ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

ಕಾಲಕಾಲಕ್ಕೆ ವೈದ್ಯರಿಗೆ ತೋರಿಸದ ಕಾರಣ, ನಾಯಿಯ ಸ್ಥಿತಿ ಚಿಂತಾಜನಕವಾಗಿದೆ.

---------------------
ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವುದಿಲ್ಲ. ಇಷ್ಟದ ಆಹಾರ ಎಲ್ಲರ ಹಕ್ಕು - ಕೆ ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಗೋವು ಹಾಲು ಕೊಡುವುದು ನಿಲ್ಲಿಸಿದೆ ಎಂದು ಕಾಣುತ್ತದೆ.

 ---------------------
ಸಿದ್ದರಾಮಯ್ಯ ಜತೆ ಇರುವವರು ಪಂಚತಾರಾ ಕುರುಬರು. ಸಾಮಾನ್ಯ ಕುರುಬರು ಜೆಡಿಎಸ್‌ನೊಂದಿಗಿದ್ದಾರೆ -ಎಚ್. ವಿಶ್ವನಾಥ್, ಜೆಡಿಎಸ್ ಮುಖಂಡ

ದೇವೇಗೌಡರು ಹರಕೆಯ ದಿನಕ್ಕಾಗಿ ಕಾಯುತ್ತಿದ್ದಾರೆ.

---------------------
ರಾಹುಲ್ ಗಾಂಧಿಯ ತಾತ, ಅಜ್ಜಿ, ತಂದೆಯಿಂದಲೇ ಆರೆಸ್ಸೆಸ್ ನಾಶಮಾಡಲು ಸಾಧ್ಯವಾಗಿಲ್ಲ - ಪ್ರಹ್ಲಾದ್ ಜೋಷಿ, ಸಂಸದ

ತಾತಾ, ಅಜ್ಜಿ, ತಂದೆಯ ಅನುಕಂಪದ ಬಲದಿಂದಲೇ ಈ ಮಟ್ಟಿಗೆ ನೀವು ಬೆಳೆದಿರುವುದು.

---------------------
ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಸಂಖ್ಯೆಯಲ್ಲಿ ಅಲ್ಪರಾಗಿರುವುದು ದೇಶದಲ್ಲಿ ಬ್ರಾಹ್ಮಣರು ಎನ್ನುವುದು ಮನವರಿಕೆಯಾದ ಬಳಿಕದ ಮಾತು.

---------------------
ಕರ್ನಾಟಕ ವಿಧಾನ ಸಭೆಗೆ ನಡೆಯುವ ಈ ಚುನಾವಣೆ ಯುದ್ಧವಲ್ಲ, ಒಂದು ಆಟ  - ಮಹಿಮಾ ಪಟೇಲ್, ಜೆಡಿಯು ನಾಯಕ

ನಾಡನ್ನು ಒತ್ತೆಯಿಟ್ಟು ಆಡುತ್ತಿರುವ ಜೂಜಾಟ.

---------------------
ಪ್ರಧಾನಿ ನರೇಂದ್ರ ಮೋದಿ ಅವರ ಅವರ ಚಿಂತನೆಯನ್ನು ಇಂದು ಜಗತ್ತು ಒಪ್ಪಿದೆ - ನಳಿನ್ ಕುಮಾರ್ ಕಟೀಲು, ಸಂಸದ

ಅದು ಚಿಂತನೆಯಲ್ಲ, ಚಿಂತೆ.

---------------------
ಬೆದರಿಸಿದರೆ ಬೆನ್ನು ತೋರಿಸಿ ಓಡುವ ಜಾಯಮಾನ ನನ್ನದಲ್ಲ - ಶ್ರೀರಾಮಲು, ಸಂಸದ

ಬೇರೆ ಯಾವುದನ್ನು ತೋರಿಸಿ ಓಡುತ್ತೀರಿ?

---------------------
ಒಬ್ಬ ದೇವೇಗೌಡ ಹೋದರೆ ಮತ್ತೊಬ್ಬ ಬರಬಹುದು, ಆದರೆ ಅದೇ ದೇವೇಗೌಡ ಸಿಗಲು ಸಾಧ್ಯವೇ ಇಲ್ಲ - ದೇವೇಗೌಡ, ಮಾಜಿ ಪ್ರಧಾನಿ

ಅದೇ ದೇವೇಗೌಡರ ಅಗತ್ಯ ಜನರಿಗೂ ಇಲ್ಲ.

---------------------
ಕುಮಾರಸ್ವಾಮಿಗೆ ಕುಮಾರಸ್ವಾಮಿಯೇ ಸಾಟಿ - ಅನಿತಾ ಕುಮಾರ ಸ್ವಾಮಿ, ಜೆಡಿಎಸ್ ನಾಯಕಿ

ನೀವು ಅವರ ಪಾಲಿನ ಚಾಟಿ.

---------------------
ಟಿಕೆಟ್ ಹಂಚಿಕೆಯಲ್ಲಿ ನಾನು ಯಾರ ಪರವಾಗಿಯೂ ಬ್ಯಾಟಿಂಗ್ ನಡೆಸಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ

ಫುಟ್‌ಬಾಲ್ ಮೈದಾನದಲ್ಲಿ ಬ್ಯಾಟ್ ಹಿಡಿದುಕೊಂಡು ಏನು ಮಾಡುತ್ತೀರಿ?
 

share
ಪಿ.ಎ.ರೈ
ಪಿ.ಎ.ರೈ
Next Story
X