Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮಡಿಕೇರಿ: ಪ್ರಥಮ ವರ್ಷದ ‘ಬಿಸು ಪರ್ಬ...

ಮಡಿಕೇರಿ: ಪ್ರಥಮ ವರ್ಷದ ‘ಬಿಸು ಪರ್ಬ ಸಂತೋಷಕೂಟ’ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ17 April 2018 11:31 PM IST
share
ಮಡಿಕೇರಿ: ಪ್ರಥಮ ವರ್ಷದ ‘ಬಿಸು ಪರ್ಬ ಸಂತೋಷಕೂಟ’ ಕಾರ್ಯಕ್ರಮ

ಮಡಿಕೇರಿ,ಎ.17 : ತುಳು ಭಾಷೆ ಶ್ರೀಮಂತ ಹಾಗೂ ಸಮೃದ್ಧ ಭಾಷೆಯಾಗಿದ್ದು, ಅದನ್ನು ಅನುಭವಿಸುವ ಮನಸ್ಸು ನಮಗೆ ಇರಬೇಕು. ದೈವಾರಾಧನೆಯ ಮೂಲಕ ಪ್ರಕೃತಿಯನ್ನು ಪ್ರೀತಿಸುವ ತುಳು ಸಂಸ್ಕೃತಿ ಇತರ ಎಲ್ಲಾ ಸಂಸ್ಕೃತಿಗೆ ಮಾದರಿಯಾಗಿದೆ ಎಂದು ಮಂಗಳೂರಿನ ಸಾಹಿತಿ ಹಾಗೂ ವಾಗ್ಮಿ ದಯಾನಂದ ಕತ್ತಲ್ಸರ್ ಬಣ್ಣಿಸಿದ್ದಾರೆ.

ತುಳುವೆರ ಜನಪದ ಕೂಟದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕಾವೇರಿ ಹಾಲ್‍ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಥಮ ವರ್ಷದ ‘ಬಿಸು ಪರ್ಬ ಸಂತೋಷಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ತುಳು ಭಾಷೆ, ಸಂಸ್ಕೃತಿ, ಆಚಾರ –ವಿಚಾರ ಪದ್ಧತಿ ಪರಂಪರೆಯ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ತುಳುವರು ಹಾಗೂ ಪ್ರಕೃತಿಗಿರುವ ಸಂಬಂಧ, ನಾಗಾರಾಧನೆ ಮತ್ತು ದೈವಾರಾಧನೆಯ ಮುಖ್ಯ ಆಶಯಗಳ ಕುರಿತು ಯುವ ಪೀಳಿಗೆಗೆ ಮನದಟ್ಟಾಗುವಂತೆ ವಿವರಿಸಿದರಲ್ಲದೆ, ತುಳು ಭಾಷೆಯನ್ನು 8ನೇ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಅದಕ್ಕೆ ಸಾಂವಿಧಾನಿಕವಾದ ಮಾನ್ಯತೆ ನೀಡುವಂತಾಗಬೇಕು ಎಂದೂ ಆಶಿಸಿದರು.

ಆದಿ ಮತ್ತು ಅಂತ್ಯವಿಲ್ಲದ ಪ್ರಾಕೃತಿಕ ಶಕ್ತಿಯೇ ದೈವವಾಗಿದ್ದು, ದೈವಾರಾಧನೆಯ ಈ ಶಕ್ತಿಯಿಂದಾಗಿಯೇ ತುಳುನಾಡು ಕಡಲ ತಡಿಯಲ್ಲಿದ್ದರೂ, ಪ್ರಾಕೃತಿಕ ವಿಕೋಪಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಸುನಾಮಿ, ಭೂಕಂಪನಗಳಾದರೂ ತುಳುನಾಡಿಗೆ ಅದರ ಪ್ರಭಾವ ತಟ್ಟದು ಎಂದು ಅವರು ವಿಶ್ಲೇಷಿಸಿದರು.

ತುಳುವರು ಬದುಕಿನಲ್ಲಿ ಕಷ್ಟವಿದ್ದರೂ, ಅದನ್ನು ಸಂತೋಷದಿಂದ ಅನುಭವಿಸುವವರಾಗಿದ್ದು, ವರ್ಷದ 12 ತಿಂಗಳುಗಳು ಕೂಡಾ ಅವರಿಗೆ ಹಬ್ಬಗಳಿವೆ. ಇಂದು ತುಳುನಾಡು ಎಂದು ಕರೆಯಲಾಗುವ ಪ್ರದೇಶ ಹಿಂದೆ ತುಳು ರಾಜ್ಯವಾಗಿತ್ತು. ಇಲ್ಲಿ 16 ಜನಾಂಗಗಳು 48 ವಿಭಾಗಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಅದಕ್ಕಾಗಿಯೇ ಇಂದು ಕೂಡ ತುಳುವರಲ್ಲಿ 16 ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ ಎಂದು ವಿವರಿಸಿದರು.

ತುಳುನಾಡಿನ ನೆಲದಲ್ಲಿ 108 ಖಾಯಿಲೆಗಳನ್ನು ಗುಣಪಡಿಸುವ ಗುಣವುಳ್ಳ 1008ಕ್ಕೂ ಅಧಿಕ ಔಷಧೀಯ ಗಿಡ ಮರಗಳಿದ್ದು, ನಾಗ ಬನ ದೈವ ಬನಗಳ ಸಂರಕ್ಷಣೆಯ ಹಿಂದೆ ಈ ಔಷಧೀಯ ಗಿಡಮರಗಳನ್ನುಉಳಿಸಿ ಬೆಳೆಸುವ ಉದ್ದೇಶ ಅಡಗಿದೆ ಎಂದು ಹೇಳಿದರು.

ಪ್ರಕೃತಿ ನಾಶವಾದರೆ ಯಾವುದೇ ಸಂಪತ್ತು ಲಭ್ಯವಾಗದು ಎಂಬ ದೂರಾಲೋಚನೆ ಹೊಂದಿದ್ದ ಹಿರಿಯರು ನಾಗಾರಾಧನೆ, ದೈವಾರಾಧನೆಯ ಹೆಸರಿನಲ್ಲಿ ಬನಗಳನ್ನು ನಿರ್ಮಿಸಿ ಅದರ ಮೂಲಕ ಪ್ರಕೃತಿಯ ಸಂರಕ್ಷಣೆ ಮಾಡಿದ್ದರು. ಆದರೆ ಇಂದು ಅಂತಹ ಬನಗಳನ್ನೂ ಕಾಂಕ್ರಿಟೀಕರಣ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ತುಳುವರು ಪ್ರಕೃತಿಯನ್ನೇ ತಮ್ಮ ತಾಯಿ ಎಂದು ಪೂಜಿಸುವವರಾಗಿದ್ದು, ಇದೇ ಹಿನ್ನೆಲೆಯಲ್ಲಿ ಕೆಡ್ಡೆಸ, ಬಿಸು ಹಬ್ಬಗಳು ಮಹತ್ವವನ್ನು ಪಡೆದಿವೆ. ಬಿಸು ಹಬ್ಬ ಎಲ್ಲಾ ಫಲಗಳನ್ನು ನೀಡಿದ ಭೂಮಿ ತಾಯಿಗೆ ಕೃತಜ್ಞತೆ ಸೂಚಿಸುವ ಹಬ್ಬವಾಗಿದೆ. ತುಳುವರಿಗೆ ಹೊಸ ವರ್ಷ ಕೂಡಾ ಬಿಸು ಹಬ್ಬದಿಂದಲೇ ಆರಂಭವಾಗಲಿದ್ದು, ನಮ್ಮನ್ನು ಮೂರ್ಖರನ್ನಾಗಿಸಿದ ಬ್ರಿಟೀಷರ ‘ಏಪ್ರಿಲ್ ಫೂಲ್’ನ್ನು ಪ್ರಜ್ಞಾವಂತ ಭಾರತೀಯರು ಹಾಗೂ ತುಳುವರು ಇನ್ನಾದರೂ ಸಮುದ್ರಕ್ಕೆ ಎಸೆಯುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಪಾಶ್ಚಾತ್ಯರ ಅನುಕರಣೆಯಿಂದಲೇ ನಾವಿಂದು ಅವನತಿಗೆ ತಲುಪಿದ್ದು, ನಮ್ಮ ಗುಂಡಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದ ಅವರು, ಮಾಟ ಮಂತ್ರಗಳೆಂಬುದು ಕೇವಲ ಮೂಢನಂಬಿಕೆಯಾಗಿದ್ದು, ಗುರುಹಿರಿಯರು, ದೈವ ದೇವರನ್ನು ಗೌರವಿಸುವ ಯಾವುದೇ ವ್ಯಕ್ತಿಗೆ ಮಾಟ ಮಂತ್ರಗಳು ಫಲಿಸದು ಎಂದು ನುಡಿದರು. ಮಾಟ ಮಾಡುವುದು ನಿಜವೇ ಆಗಿದ್ದಲ್ಲಿ ಅಂತಹ ಪಂಡಿತರು ಅದನ್ನು ತನ್ನ ಮೇಲೆ ಪ್ರಯೋಗಿಸಿ ಸಾಬೀತುಪಡಿಸಲಿ ಎಂದು ಅವರು ಸವಾಲು ಹಾಕಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸಿಗೆಗೆ ಭತ್ತ ಸುರಿದು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿದ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಕಿಲ್ಪಾಡಿ ಶೇಖರ ಭಂಡಾರಿ ಮಾತನಾಡಿ, ಕಡಲ ತಟದಿಂದ ಕಾವೇರಿ ನಾಡಿಗೆ ಬಂದಿರುವ ತುಳು ಭಾಷೆಯನ್ನಾಡುವ ಎಲ್ಲಾ ಜಾತಿ-ಜನಾಂಗದ ಬಾಂಧವರು ಭಾಷೆಯ ಹೆಸರಿನಲ್ಲಿ ಒಗ್ಗಟ್ಟಾಗಿ ಒಂದೆಡೆ ಸೇರಿರುವ ಈ ದಿನ ಇಲ್ಲಿನ ತುಳುವರ ಚರಿತ್ರೆಯಲ್ಲಿ ಇತಿಹಾಸ ಸೃಷ್ಟಿದ ದಿನವಾಗಿದೆ ಎಂದು ಬಣ್ಣಿಸಿದರಲ್ಲದೆ, ತುಳು ಕೂಟ ಜಾತಿ ಮತ್ತು ರಾಜಕೀಯ ರಹಿತವಾದ ಸಂಘಟನೆಯಾಗಿದ್ದು, ಇದನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ತುಳು ಭಾಷಿಗರ ಸಹಕಾರ ಅಗತ್ಯವಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ತುಳುವರ ಸಹಕಾರ ಸಂಘವನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಯಾಡಿದ ಕೂಟದ ಗೌರವ ಸಲಹೆಗಾರ ಬಾಲಕೃಷ್ಣ ರೈ ಅವರು, ಕೇವಲ 4-5ಮಂದಿ ಸೇರಿ ಚರ್ಚಿಸಿ ಎರಡು ವರ್ಷಗಳ ಹಿಂದೆ ಆರಂಭಿಸಿದ ಈ ಸಂಸ್ಥೆ ಇಂದು ಜಿಲ್ಲೆಯಾದ್ಯಂತ ಉತ್ತಮವಾಗಿ ಸಂಘಟಿತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬೆಳೆಯುವಂತಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ‘ಅಪ್ಪೆ ಟೀಚರ್’ ತುಳು ಚಿತ್ರದ ನಾಯಕ ನಟ ಸುನಿಲ್ ಬಜೆಗುಂಡಿ ಮಾತನಾಡಿ, ಕೊಡಗಿನಲ್ಲಿ ಭಾಷೆಯ ಹೆಸರಿನಲ್ಲಿ ಎಲ್ಲ ತುಳುವರ ಒಗ್ಗಟ್ಟಾಗಿರುವುದು ಸಂತೋಷದ ಸಂಗತಿಯಾಗಿದ್ದು, ತುಳುವರು ತಮ್ಮ ಮಕ್ಕಳಿಗೆ ತುಳು ಸಂಸ್ಕೃತಿ ಆಚಾರ ವಿಚಾರವನ್ನು ತಿಳಿಸಿಕೊಡುವುದರೊಂದಿಗೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಯುವಜನರು ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ತಮ್ಮ ಹವ್ಯಾಸಗಳನ್ನು ಜೊತೆಗೆ ಕೊಂಡೊಯ್ಯಬೇಕು. ಗುರುಹಿರಿಯರಿಗೆ ಗೌರವ ನೀಡುವುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಕೂಟದ ಉಪಾಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ ತುಳು ಭಾಷಿಗರನ್ನು ಒಗ್ಗೂಡಿಸುವ ಹಾಗೂ ನಮ್ಮ ಆಚಾರ-ವಿಚಾರ ಸಂಸ್ಕರತಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತುಳುವೆರ ಜನಪದ ಕೂಟ ಸ್ಥಾಪನೆಯಾಗಿದ್ದು, ಸಂಘಟನೆ ಇನ್ನಷ್ಟು ಬೆಳೆಯಬೇಕಿದೆ ಎಂದರು.

ಬೆಂಗಳೂರಿನ ಉದ್ಯಮಿ ಜಯಂತಿ ಆರ್. ಶೆಟ್ಟಿ, ಕೂಟದ ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ, ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಮತ್ತಿತರರು ಮಾತನಾಡಿದರು.

ಬಿಸು ಪರ್ಬ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಬಿ.ಬಿ.ಐತಪ್ಪ ರೈ ಅವರು ಅಧ್ಯಕ್ಷತೆವಹಿಸಿ, ಪ್ರಥಮ ವರ್ಷದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸುವ ಗುರಿ ಹೊಂದಲಾಗಿತ್ತಾದರೂ, ಚುನಾವಣಾ ನೀತಿ ಸಂಹಿತೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಅದ್ಧೂರಿಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಕೂಟದ ಉಪಾಧ್ಯಕ್ಷ ಬಿ.ಡಿ.ನಾರಾಯಣ ರೈ, ಸಲಹೆಗಾರ ಎಂ.ಡಿ.ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರಐ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್ ಕುಲಾಲ್,ವೀರಾಜಪೇಟೆ ತಾಲೂಕು ಅಧ್ಯಕ್ಷ ದಾಮೋದರ ಆಚಾರ್ಯ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ರವಿ ಶೆಟ್ಟಿ ಮತ್ತಿತರರು ಹಾಜರಿದ್ದರು.

ಪುರುಷೋತ್ತಮ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಸ್ವಾಗತಿಸಿದರು. ಬಿ.ಎಸ್. ಜಯಪ್ಪ ಕಾರ್ಯಕ್ರಮ ನಿರ್ವಹಿಸಿದರು. 

ಅಪರಾಹ್ನ ಸಿನಿಮಾ ಮತ್ತು ಜನಪದ ನೃತ್ಯ, ಉಮೇಶ್ ಮಿಜಾರು ತಂಡದವರಿಂದ ತೆಲಿಕೆದ ಗೊಂಚಿಲ್ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X