ಬಾಡಿಗೆ ಕಟ್ಟಿಲ್ಲ ಅಂತ ಪ್ರಮಾಣ ಮಾಡಿ ಹೇಳಲಿ: ಮನೆ ಮಾಲಕರಿಗೆ ನಟ ಯಶ್ ಸವಾಲು
ಬೆಂಗಳೂರು, ಎ.18: ಬನಶಂಕರಿಯಲ್ಲಿರುವ ನಟ ಯಶ್ ಮನೆಯನ್ನು ಮೂರು ತಿಂಗಳ ಒಳಗೆ ಖಾಲಿ ಮಾಡುವಂತೆ ಮಂಗಳವಾರ ನಗರದ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡುತ್ತಿದ್ದಂತೆಯೇ ರಾಕಿಂಗ್ ಸ್ಟಾರ್ ಯಶ್ ಬುಧವಾರ ಫೇಸ್ ಬುಕ್ ಲೈವ್ನಲ್ಲಿ ಈ ವಿವಾದದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾನು ಪ್ರತಿ ತಿಂಗಳೂ ಬಾಡಿಗೆ ಕಟ್ಟಿದ್ದೇನೆ. ಆ ಮನೆ ನನಗೆ ಲಕ್ಕಿ ಅಂತ ಕೆಲವರು ಹೇಳ್ತಿದ್ದಾರೆ. ಅದು ಸುಳ್ಳು. ನನಗೆ ಅಂತಹ ಮೂಢನಂಬಿಕೆ ಇಲ್ಲ. ನಾನು ಬಾಡಿಗೆ ಕಟ್ಟಿಲ್ಲ ಅಂತ ಮನೆ ಮಾಲಕರು ಅವರ ಮಗಳ ಮೇಲೆ ಪ್ರಮಾಣ ಮಾಡಿ ಹೇಳಲಿ, ಆಗ ಅವರು ಹೇಳಿದ್ದನ್ನು ಕೊಡುತ್ತೇನೆ ಎಂದು ಫೇಸ್ ಬುಕ್ ಲೈವ್ ನಲ್ಲಿ ನಟ ಯಶ್ ಸವಾಲು ಹಾಕಿದ್ದಾರೆ.
ಬಾಡಿಗೆ ಕಟ್ಟಿರುವ ಬಗ್ಗೆ ಫೇಸ್ ಬುಕ್ ಲೈವ್ ವೇಳೆಯಲ್ಲಿ ನಟ ಯಶ್ ದಾಖಲೆಗಳನ್ನ ಪ್ರಸ್ತುತ ಪಡಿಸಿದರು. ಮನೆ ಖಾಲಿ ಮಾಡಿ, ಕೀ ಕೊಡುವ ಸಂದರ್ಭದಲ್ಲಿ ಮನೆ ಮಾಲಕರು ಹಾಗೂ ಯಶ್ ತಾಯಿ ಪುಷ್ಪ ನಡುವೆ ಸಣ್ಣ ಜಗಳ ಆಗಿದ್ದು, ಆ ಜಗಳ ಹಾಗೂ ಮನೆ ಮಾಲಕರ ಅಹಂ ನಿಂದಾಗಿ ಇಷ್ಟೊಂದು ದೊಡ್ಡ ರಾದ್ಧಾಂತ ಆಗಿದೆ ಎಂದಿದ್ದಾರೆ ನಟ ಯಶ್.
Next Story