ಕಂಪೆನಿಗೆ ಲಕ್ಷಾಂತರ ರೂ. ವಂಚನೆ: ದೂರು
ಮಲ್ಪೆ, ಎ.18: ಅಮೆಝಾನ್ ಡಿಸ್ಟ್ರೀಬ್ಯೂಟರ್ ಕಂಪೆನಿಯ ಉದ್ಯೋಗಿ ಯೊಬ್ಬ ಕಂಪೆನಿಗೆ ಲಕ್ಷಾಂತರ ರೂ. ವಂಚನೆ ಎಸಗಿ ಪರಾರಿಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಗೀಶ್ ಶೆಟ್ಟಿ ಎಂಬವರು ಅಮೆಝಾನ್ ಡಿಸ್ಟ್ರೀಬ್ಯೂಟರ್ ಕಂಪೆನಿಯ ಉಡುಪಿ ಮೂಡುಬೆಟ್ಟು ಶಾಖೆಯಲ್ಲಿ ಅಂಗಡಿಗಳಿಗೆ ತೆರಳಿ ಕಂಪನಿಯ ಉತ್ಪನ್ನ ಗಳ ಆರ್ಡರ್ ತೆಗದುಕೊಂಡು ಬರುವುದು ಹಾಗೂ ಸಾಲದ ಬಿಲ್ಲನ್ನು ವಸೂಲಿ ಮಾಡಿ ಸಂಜೆ ಸಂದಾಯ ಮಾಡುವ ಕೆಲಸ ಮಾಡಿಕೊಂಡಿದ್ದರು. ಆದರೆ ಈತ ಮಾ.22ರಿಂದ ಎ.6ರವರೆಗೆ ಅಂಗಡಿಯಿಂದ ಸಾಲ ವಸೂಲಿ ಮಾಡಿದ ಹಣ ವನ್ನು ಕಂಪನಿಗೆ ಪಾವತಿಸದೆ ಸ್ವಂತಕ್ಕೆ ಉಪಯೋಗಿಸಿಕೊಂಡು ಮತ್ತು ಕೆಲವು ಅಂಗಡಿಗಳ ಬಿಲ್ಲುಗಳ ಮೊತ್ತಕ್ಕೆ ಸ್ವಂತ ಚೆಕ್ ನೀಡಿ ಮೋಸ ಮಾಡಿದ್ದಾನೆ.
ಹೀಗೆ ಯೋಗೀಶ್ ಶೆಟ್ಟಿ ಒಟ್ಟು 8,47,815ರೂ.ಗಳನ್ನು ಕಂಪನಿಗೆ ಪಾವತಿ ಸದೆ ಮೋಸ ಮಾಡಿ, ಎ.11ರಂದು ಪರಾರಿಯಾಗಿದ್ದಾನೆ ಎಂದು ಕಂಪೆನಿಯ ಬಿಸಿನೇಸ್ ಮೆನೇಜರ್ ಬಸಪ್ಪಎನ್. ನೀಡಿದ ದೂರಿನಂತೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story