ಮಡಿಕೇರಿ: ರಸ್ತೆಯಲ್ಲಿ ಮಗುಚಿ ಬಿದ್ದ ಸರಕು ಸಾಗಿಸುತ್ತಿದ್ದ ಲಾರಿ
ಮಡಿಕೇರಿ,ಎ.18: ಸರಕು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಯ ಮುಂಭಾಗದಲ್ಲಿ ಮಗುಚಿಕೊಂಡಿರುವ ಘಟನೆ ಎ.18ರಂದು ಮುಂಜಾನೆ 4 ಗಂಟೆಯ ಸುಮಾರಿನಲ್ಲಿ ಬೋಯಿಕೇರಿಯಲ್ಲಿ ಸಂಭವಿಸಿದೆ.
ಮಂಗಳೂರಿನಿಂದ ಮೈಸೂರಿಗೆ ಕೊಕ್ಕೋ ಸರಕನ್ನು ಸಾಗಿಸುತ್ತಿದ್ದ ಲಾರಿಗೆ ಮಾರ್ಗ ಮಧ್ಯದ ಬೋಯಿಕೇರಿಯಲ್ಲಿ ಕಾರೊಂದು ಎದುರಾಗಿದ್ದು, ಸಂಭವನೀಯ ಅವಘಡವನ್ನು ತಪ್ಪಿಸಲೆಂದು ಲಾರಿ ಚಾಲಕ, ಮುಂಭಾಗದಲ್ಲಿ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಹಿಂಬದಿಯ ಬಲಭಾಗಕ್ಕೆ ಢಿಕ್ಕಿ ಹೊಡೆದಿದ್ದಾನೆ.
ಆದರೂ ಚಾಲಕನ ನಿಯತ್ರಣಕ್ಕೆ ಸಿಗದ ಲಾರಿಯು ರಸ್ತೆ ಬದಿಯ ಅಂಗಡಿ ಮುಂಭಾಗದಲ್ಲಿ ಮಗುಚಿಕೊಂಡಿದೆ. ಅದೃಷ್ಟವಶಾತ್ ಲಾರಿ ಚಾಲಕ ಕೆ.ಆರ್.ನಗರದ ರಮೇಶ್ ಎಂಬುವವರು ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಕ್ಕೊಳಗಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Next Story