ಗುಂಡಿನ ದಾಳಿ: ನಾಲ್ವರು ಸೌದಿ ಅಧಿಕಾರಿಗಳ ಮೃತ್ಯು

ರಿಯಾದ್, ಎ.20: ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸೌದಿ ಅರೇಬಿಯಾದ ನಾಲ್ವರು ಅಧಿಕಾರಿಗಳು ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಘಟನೆ ದಕ್ಷಿಣ ಆಸೀರ್ ಪ್ರಾಂತ್ಯದಲ್ಲಿ ನಡೆದಿದೆ.
ದಾಳಿಕೋರರು ಚೆಕ್‌ಪೋಸ್ಟ್ ಮೇಲೆ ಗುಂಡಿನ ಸುರಿಮಳೆಗೈದಾಗ ಮೂವರು ಸ್ಥಳದಲ್ಲೇ ಮೃತಪಟ್ಟರು ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಆದರೆ ದಾಳಿಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ತಿಳಿದುಬಂದಿಲ್ಲ. ಸ್ಥಳೀಯ ಅಧಿಕಾರಿಗಳು ಇಬ್ಬರು ಶಂಕಿತರನ್ನು ಹಿಡಿದಾಗ, ಮೂರನೇ ವ್ಯಕ್ತಿ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಎಂದು ಅಧಿಕೃತ ಮೂಲಗಳು ಹೇಳಿವೆ.
ಸೌದಿ ಅರೇಬಿಯಾ 2015ರ ಮಾರ್ಚ್‌ನಿಂದೀಚೆಗೆ ದಕ್ಷಿಣದ ನೆರೆರಾಷ್ಟ್ರವಾದ ಯೆಮನ್ ಜತೆಗೆ ಸಂಘರ್ಷ ಹೊಂದಿದೆ.
Next Story