ಕಥುವಾ ಪ್ರಕರಣ: ಪಿಎಫ್‌ಐಯಿಂದ ಮೌನ ಪ್ರತಿಭಟನೆ

ಉಡುಪಿ, ಎ.20: ಕಥುವಾ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಇದರ ವತಿಯಿಂದ ಕ್ಯಾಂಡಲ್ ದೀಪ ಹಚ್ಚಿ ವೌನ ಪ್ರತಿಭಟನೆ ನಡೆಸ ಲಾಯಿತು.
ಈ ಸಂದರ್ಭದಲ್ಲಿ ಪಿಎಫ್‌ಐ ಉಡುಪಿ ವಿಭಾಗ ಅಧ್ಯಕ್ಷ ಬಶೀರ್ ಅಹ್ಮದ್, ಕಾರ್ಯದರ್ಶಿ ನವಾಝ್, ಜಿಲ್ಲಾ ಕಾರ್ಯದರ್ಶಿ ಅಜರ್ ಉಡುಪಿ, ಎಸ್‌ಡಿಪಿಐ ಉಡುಪಿ ಕ್ಷೇತ್ರದ ಅಧ್ಯಕ್ಷ ನಝೀರ್ ಅಹ್ಮದ್, ಜಿಲ್ಲಾ ಸದಸ್ಯ ಶಫೀಕ್ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.
Next Story





