ಒಕ್ಕಲಿಗನಾಗಿ ಹುಟ್ಟಿದ್ದೇ ತಪ್ಪಾಗಿದೆ: ಶಾಸಕ ಚಲುವರಾಯಸ್ವಾಮಿ

ನಾಗಮಂಗಲ, ಎ.20: ನಾನು ಒಕ್ಕಲಿಗನಾಗಿ ಹುಟ್ಟಿದೇ ತಪ್ಪಾಗಿದೆ. ನಮ್ಮಂತ ಮುಗ್ದರ ಮೇಲೇಕೆ ದ್ವೇಷ ಕಾರುತ್ತೀರಿ. ನಮ್ಮ ಪಾಡಿಗೆ ನಮ್ಮ ಬಿಟ್ಟುಬಿಡಿ ನಾವು ನಿಮ್ಮ ವಿಚಾರ ಮಾತನಾಡಲ್ಲ. ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದೇ ತಪ್ಪಾಗಿದೆಯೇ ಎಂದು ಮಾಜಿ ಶಾಸಕ ಎನ್. ಚಲುವರಾಯಸ್ವಾಮಿ ಜೆಡಿಎಸ್ ವರಿಷ್ಠ ದೇವೇಗೌಡರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕಿದರು.
ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳನ್ನು ಬಿಟ್ಟು ನಾನು ಮತ್ತು ಝಮೀರ್, ಬಾಲಕೃಷ್ಣರ ಕ್ಷೇತ್ರಗಳ ಮೇಲೆ ಏಕೆ ಕಣ್ಣು ಎಂದು ಕಿಡಿಕಾರಿದರು.
ನಮಗೆ ಪ್ರೀತಿಯಿಂದ ಗೆಲ್ಲುವುದು ಗೊತ್ತೇ ಹೊರತು ದ್ವೇಷದಿಂದ ರಾಜಕಾರಣ ಮಾಡುವುದು ಗೊತ್ತಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ನಿಮ್ಮ ಬಗ್ಗೆ ನಾವು ಮಾತನಾಡಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಬಗ್ಗೆ ಕಿಡಿಕಾರಿದರು.
ಯಾರ ಬೆನ್ನೀಗೂ ಚೂರಿ ಹಾಕಿಲ್ಲ: 13 ವರ್ಷ ನಾಗಮಂಗಲ ಕ್ಷೇತ್ರದಲ್ಲಿ ಜನತಾ ಪ್ರತಿನಿಧಿಯಾಗಿ ಆಶೀರ್ವದಿಸಿದ್ದೀರಿ. ನಾನು ಎಂದೂ ಕಣ್ಣೀರು ಹಾಕಿದವನಲ್ಲ. ನಾನು ಯಾರ ಬೆನ್ನಿಗೂ ಚೂರಿ ಇರಿದವನಲ್ಲ. ಪಕ್ಷಕ್ಕಾಗಿ ದುಡಿದದ್ದು ಮತ್ತು ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದೇ ತಪ್ಪಾಯಿತೇ ಎಂದು ಪ್ರಶ್ನಿಸಿದರು.
ನಮ್ಮ ಕುಟುಂಬ ರಾಜಕೀಯವಾಗಿ ಬೆಳೆದ ಕುಟುಂಬವಲ್ಲ. ನನಗೂ ಆಸೆ ಇದೆ, ನಾನು ಶಾಸಕನಾಗಿ ಮಂತ್ರಿಯಾಗಿ ಎಂಪಿಯಾಗಿದ್ದೇನೆ. ಆದರೆ ಸಿಎಂ ಆಗಬೇಕು ಎಂದು ಆಸೆಪಟ್ಟವನಲ್ಲ. ನಾವೆಲ್ಲಾ ಮುಗ್ದರಾಗಿದ್ದೇವೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ನೋಡಿ, ನನ್ನನ್ನು ಕೈಬಿಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಜಾತಿಗೆ ಮಣೆ ಹಾಕಿದ ಕ್ಷೇತ್ರವಲ್ಲ:
ವೇದಿಕೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕರಾದ ಬಿ.ರಾಮಕೃಷ್ಣ, ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಹುಚ್ಚೇಗೌಡ, ಗಣಿಗ ರವಿಕುಮಾರಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.







